ಶೀರ್ಷಿಕೆ : ಉದ್ಯೋಗ ಸೃಜನ ಯೋಜನೆ : ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಜಿ ಆಹ್ವಾನ
ಲಿಂಕ್ : ಉದ್ಯೋಗ ಸೃಜನ ಯೋಜನೆ : ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಜಿ ಆಹ್ವಾನ
ಉದ್ಯೋಗ ಸೃಜನ ಯೋಜನೆ : ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಜಿ ಆಹ್ವಾನ
ಕೊಪ್ಪಳ, ಮೇ. 17 (ಕರ್ನಾಟಕ ವಾರ್ತೆ): ಸರ್ಕಾರವು ನಿರುದ್ಯೋಗ ವಿದ್ಯಾವಂತ ಯುವಕ/ ಯುವತಿಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಪಿಎಂಇಜಿಪಿ) ಯನ್ನು ಪ್ರಸಕ್ತ ಸಾಲಿಗೂ ಮುಂದುವರೆಸಿದ್ದು, ಈ ಸೌಲಭ್ಯ ಪಡೆಯಲು ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯ ಗರಿಷ್ಠ ವೆಚ್ಚ ರೂ.25.00 ಲಕ್ಷ ಇರುವ ತಯಾರಿಕ ಮತ್ತು ರೂ.10.00 ಲಕ್ಷ ಇರುವ ಸೇವಾ ಚಟುವಟಿಕೆಗಳಿಗೆ ಬ್ಯಾಂಕುಗಳು ನೀಡುವ ಸಾಲದ ಮೊತ್ತದ ಮೇಲೆ ಸಾಮಾನ್ಯ ವರ್ಗದ ಪಟ್ಟಣ ಫಲಾನುಭವಿಗಳಿಗೆ ಶೇ. 15% ರಿಂದ 25% ಮತ್ತು ವಿಶೇಷ ವರ್ಗದ (ಪ.ಜಾತಿ/ ಪ.ಪಂಗಡ/ ಹಿಂದುಳಿದ ವರ್ಗ/ ಅಲ್ಪಸಂಖ್ಯಾತರು/ ಅಂಗವಿಕಲರು/ ಮಾಜಿ ಸೈನಿಕ/ಮಹಿಳೆ), ಗ್ರಾಮೀಣ ಫಲಾನುಭವಿಗಳಿಗೆ ಶೇ. 25% ರಿಂದ 35% ಸಹಾಯಧನ ಸೌಲಭ್ಯ ಇರುತ್ತದೆ. ಉದ್ದಿಮೆಯನ್ನು ಪ್ರಾರಂಭ ಮಾಡುವ ಸಾಮಾನ್ಯ ವರ್ಗದವರು ಯೋಜನಾ ವೆಚ್ಚದ ಶೇ. 10% ಮತ್ತು ವಿಶೇಷ ವರ್ಗದವರಿಗೆ ಶೇ. 5% ರಷ್ಟು ಸ್ವಂತ ಭಂಡವಾಳ ಹೂಡಬೇಕಾಗಿರುತ್ತದೆ.
ಯೋಜನೆಯು ಹೊಸ ಘಟಕಗಳಿಗೆ ಮಾತ್ರ ಲಭ್ಯವಿರುತ್ತದೆ. ಮತ್ತು ಅಭ್ಯರ್ಥಿಯ ಯೋಜನಾ ವೆಚ್ಚ ರೂ. 10.00 ಲಕ್ಷ ಮೇಲ್ಪಟ್ಟ ಘಟಕಗಳಿಗೆ ವಿದ್ಯಾರ್ಹತೆ 8ನೇ ತರಗತಿ ಪಾಸಾಗಿರಬೇಕು, ಅಥವಾ ಗುರುತಿಸಿದ ಶಿಕ್ಷಣ ಸಂಸ್ಥೆಗಳಿಂದ ವೃತ್ತಿಪರ ತರಬೇತಿ ಸಂಸ್ಥೆಯಿಂದ ವೃತ್ತಿಪರ ತರಬೇತಿ, ಐಟಿಐ, ಡಿಪ್ಲೋಮಾ ಪದವಿ ಹೊಂದಿರಬೇಕು. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ಲೈನ್ ಮೂಲಕ ವೈಬ್ಸೈಟ್ www.kvic.org.in / www.pmegp.in ಸಲ್ಲಿಸಿ, ಅರ್ಜಿ ಪ್ರತಿ ಹಾಗೂ ನಿಗಧಿತ ದಾಖಲಾತಿಯೊಂದಿಗೆ ಕಛೇರಿ ದ್ವಿಪ್ರತಿಯಲ್ಲಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ, ದೂರವಾಣಿ ಸಂಖ್ಯೆ 08539-231548 ಗೆ ಕಛೇರಿ ವೇಳೆಯಲ್ಲಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಉದ್ಯೋಗ ಸೃಜನ ಯೋಜನೆ : ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಉದ್ಯೋಗ ಸೃಜನ ಯೋಜನೆ : ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಉದ್ಯೋಗ ಸೃಜನ ಯೋಜನೆ : ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/05/blog-post_285.html
0 Response to "ಉದ್ಯೋಗ ಸೃಜನ ಯೋಜನೆ : ಸ್ವಯಂ ಉದ್ಯೋಗ ಕೈಗೊಳ್ಳಲು ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ