ಶೀರ್ಷಿಕೆ : ಭಗೀರಥರ ಪ್ರಯತ್ನದಿಂದ ಭೂಲೋಕದ ಜೀವರಾಶಿಗೆ ನೀರು : ರಾಜಶೇಖರ ಹಿಟ್ನಾಳ
ಲಿಂಕ್ : ಭಗೀರಥರ ಪ್ರಯತ್ನದಿಂದ ಭೂಲೋಕದ ಜೀವರಾಶಿಗೆ ನೀರು : ರಾಜಶೇಖರ ಹಿಟ್ನಾಳ
ಭಗೀರಥರ ಪ್ರಯತ್ನದಿಂದ ಭೂಲೋಕದ ಜೀವರಾಶಿಗೆ ನೀರು : ರಾಜಶೇಖರ ಹಿಟ್ನಾಳ
ಕೊಪ್ಪಳ, ಮೇ. 02 (ಕರ್ನಾಟಕ ವಾರ್ತೆ) : ಭಗೀರಥರ ಸತತ ಪ್ರಯತ್ನ ಹಾಗೂ ತಪಸ್ಸಿನ ಫಲದಿಂದ ಭೂಲೋಕದ ಜೀವರಾಶಿಗೆ ಜೀವಜಲವಾದ ನೀರು ದೊರೆಯುವಂತಾಯಿತು ಎಂದು ಜಿಲ್ಲಾ ಪಂಚಾಯತಿ ಸದಸ್ಯ ರಾಜಶೇಖರ ಹಿಟ್ನಾಳ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಶಾದಿಮಹಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೋಲಿನಿಂದ ಧೃತಿಗೆಡದೆ, ಸತತ ಪ್ರಯತ್ನ ಮಾಡಬೇಕು. ಪ್ರಯತ್ನಕ್ಕೆ ಇನ್ನೊಂದು ಹೆಸರೇ ಭಗೀರಥರು. ಅವರ ಸತತ ಯತ್ನದಿಂದ, ತಪಸ್ಸಿನಿಂದ, ಭೂಲೋಕದ ಜೀವರಾಶಿಗೆ ನೀರು ದೊರೆಯುವಂತಾಯಿತು. ಭಗೀರಥರ ತಪಸ್ಸಿನ ಫಲವಾಗಿ ಹರಿದು ಬಂದ ಗಂಗೆಯನ್ನು ಭಾಗಿರಥಿ ಎಂದೇ ಕರೆಯುತ್ತಾರೆ. ಉಪ್ಪಾರ ಸಮಾಜ ಇಂದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಶಿಕ್ಷಣ ಅತ್ಯವಶ್ಯಕವಾಗಿದೆ. ಸಮಾಜದ ಜನತೆ ಶಿಕ್ಷಣ ಪಡೆದು ಪ್ರಜ್ಞಾವಂತ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕು. ಸಮಾಜದ ಏಳಿಗೆಗಾಗಿ ಸರ್ಕಾರ ಉಪ್ಪಾರ ಅಭಿವೃದ್ಧಿ ನಿಗಮ ಪ್ರಾರಂಭಕ್ಕೆ ಕ್ರಮ ಕೈಗೊಂಡಿದೆ. ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು, ಸಮಾಜ ಅಭಿವೃದ್ಧಿಯತ್ತ ಸಾಗಬೇಕು ಎಂದು ಜಿ.ಪಂ. ಸದಸ್ಯ ರಾಜಶೇಖರ ಹಿಟ್ನಾಳ್ ಕರೆ ನೀಡಿದರು.
ತಳಕಲ್ ಕಾಲೇಜು ಉಪನ್ಯಾಸಕ ಫಕಿರಪ್ಪ ವಜ್ರಬಂಡಿ ಅವರು ವಿಶೇಷ ಉಪನ್ಯಾಸ ನೀಡಿ, ರಾಜ್ಯದಲ್ಲಿ ವಿವಿಧ ದಾರ್ಶನಿಕರ ಕುರಿತು ಸಂಶೋಧನೆಗಾಗಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಪೀಠ ಸ್ಥಾಪನೆಯಾಗಿವೆ. ಅದೇ ರೀತಿ ಭಗೀರಥರ ಕುರಿತು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪನೆಯಾಗಬೇಕು. ಹೀಗಾದಾಗ ಮಾತ್ರ ಸಮಗ್ರ ವಿವರ ದೊರೆಯಲು ಸಾಧ್ಯವಾಗಲಿದೆ. ಭಗೀರಥರ ವ್ಯಕ್ತಿತ್ವ ಹಿಮಾಲಯ ಪರ್ವತದಷ್ಟು ಎತ್ತರ. ಸಾಕ್ಷಾತ್ ದೈವಗಂಗೆಯನ್ನೇ ಶಿವನ ಜಟೆಯಿಂದ ಭೂಮಿಗೆ ತರುವ ಮೂಲಕ ಭಗೀರಥ ಮಹರ್ಷಿಗಳು ಈ ಜಗತ್ತಿನಲ್ಲಿ ಮನುಷ್ಯನಿಂದ ಸಾಧ್ಯವಾಗದ ಕೆಲಸ ಯಾವುದೂ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ದೇವಲೋಕದಿಂದ ಗಂಗೆಯನ್ನು ಭೂಮಿಗೆ ತರಿಸಿಕೊಂಡಿದ್ದು ಜಗತ್ತಿನಲ್ಲಿಯೇ ಮನುಷ್ಯನ ಬಹುದೊಡ್ಡ ಪ್ರಯತ್ನವಾಗಿದೆ. ಕರ್ನಾಟಕದಲ್ಲಿ ಸಾಮಾನ್ಯವಾಗಿ ಉಪ್ಪಾರರು ಎಂದು ಕರೆಯಲ್ಪಡುವ ಭಗೀರಥರ ಪ್ರಾಚೀನ ಕಸುಬು ಉಪ್ಪು ತಯಾರಿಸುವುದಾಗಿತ್ತು. ಉಪ್ಪು ತಯಾರಿಸುವುದರಿಂದಲೇ ಉಪ್ಪಾರರು ಎಂದು ಇವರು ಚಿರಪರಿಚಿತರು. ಬ್ರಿಟಿಷರು ಹೆಚ್ಚಿನ ಸುಂಕ ವಿಧಿಸುವ ಮೂಲಕ ಉಪ್ಪಿನ ಮೇಲೆ ನಿಯಂತ್ರಣ ಹೇರಿದರು. ಇದನ್ನು ವಿರೋಧಿಸಿ ಅಂದು ಮಹಾತ್ಮಾ ಗಾಂಧೀಜಿ ಅವರು ಕೂಡಾ ದಂಡಿ ಉಪ್ಪಿನ ಸತ್ಯಾಗ್ರಹ ನಡೆಸಿದ್ದರು ಎಂಬುದನ್ನು ನಾವು ಇಂದು ಸ್ಮರಿಸಬಹುದಾಗಿದೆ ಎಂದರು.
ರಾಜ್ಯ ಜಲಸಂಪನ್ಮೂಲ ಅಭಿವೃದ್ಧಿ ಸಂಘದ ಮುಖ್ಯ ಇಂಜಿನಿಯರ್ ಬೆಂಗಳೂರಿನ ಪ್ರಭಾಕರ ಚಿಣಿ ಅವರು ಮಾತನಾಡಿ, ಉಪ್ಪಾರ ಸಮುದಾಯ ರಾಜ್ಯದಲ್ಲಿ ಮಾತ್ರವಲ್ಲಿ ದೇಶದ ನಾನಾ ರಾಜ್ಯಗಳಲ್ಲಿ ಬೇರೆ ಬೇರೆ ವೃತ್ತಿಯಲ್ಲಿ ತೊಡಗಿದ್ದಾರೆ ಅಲ್ಲದೆ, ಉನ್ನತ ಹುದ್ದೆಯನ್ನೂ ಅಲಂಕರಿಸಿದ್ದಾರೆ. ಸಮುದಾಯದ ಸಂಘಟನೆಯಿಂದ, ಅಭಿವೃದ್ಧಿಗೆ ಸಹಕಾರವಾಗಲಿದೆ. ಸಮಾಜದಲ್ಲಿ ಮುಗ್ಧತನ, ಬಡತನ ಮತ್ತು ಅನರಕ್ಷತೆ ಹೆಚ್ಚಾಗಿದ್ದು, ಶಿಕ್ಷಣದಿಂದ ಮಾತ್ರ ಎಲ್ಲ ಸಮಸ್ಯೆಗಳ ನಿವಾರಣೆ ಸಾಧ್ಯವಾಗಲಿದೆ ಎಂದರು.
ಸಮಾರಂಭದಲ್ಲಿ ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಜಿ.ಪಂ. ಸದಸ್ಯರುಗಳಾದ ಗೂಳಪ್ಪ ಹಲಗೇರಿ, ನೇಮಣ್ಣ ಮೇಲಸಕ್ರಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಲಿ, ಸಮಾಜದ ಪ್ರಮುಖರಾದ ಲಕ್ಷ್ಮೀಕಾಂತ, ಯಂಕಣ್ಣ ಹೊಸಳ್ಳಿ, ನಾಗರಾಜ ಚಳ್ಳೊಳ್ಳಿ, ಹೆಚ್.ಆರ್. ಪಾಟೀಲ, ಯಂಕನಗೌಡ ಪಾಟೀಲ, ವೆಂಕಟೇಶ ಬಾರಕೇರ, ಯಲ್ಲಪ್ಪ ಬದ್ದಿ, ಜಡಿಯಪ್ಪ ಬಂಗಾಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಸ್ವಾಗತಿಸಿದರು, ಸಿ.ವಿ. ಜಡಿಯವರ್ ನಿರೂಪಿಸಿ ವಂದಿಸಿದರು. ಸದಾಶಿವ ಪಾಟೀಲ್ ಅವರು ನಾಡಗೀತೆ ಮತ್ತು ರೈತ ಗೀತೆ ಪ್ರಸ್ತುತಪಡಿಸಿದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಭಗೀರಥರ ಭಾವಚಿತ್ರದ ಮೆರವಣಿಗೆಗೆ ನಗರದ ಸಿರಸಪ್ಪಯ್ಯ ಮಠ ಆವರಣದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಚಾಲನೆ ನೀಡಿದರು. ಜಿ.ಪಂ. ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ಕಲಾತಂಡಗಳು ಭಾಗವಹಿಸಿ, ಮೆರವಣಿಗೆಗೆ ಮೆರಗು ತಂದರು.
ಹೀಗಾಗಿ ಲೇಖನಗಳು ಭಗೀರಥರ ಪ್ರಯತ್ನದಿಂದ ಭೂಲೋಕದ ಜೀವರಾಶಿಗೆ ನೀರು : ರಾಜಶೇಖರ ಹಿಟ್ನಾಳ
ಎಲ್ಲಾ ಲೇಖನಗಳು ಆಗಿದೆ ಭಗೀರಥರ ಪ್ರಯತ್ನದಿಂದ ಭೂಲೋಕದ ಜೀವರಾಶಿಗೆ ನೀರು : ರಾಜಶೇಖರ ಹಿಟ್ನಾಳ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಭಗೀರಥರ ಪ್ರಯತ್ನದಿಂದ ಭೂಲೋಕದ ಜೀವರಾಶಿಗೆ ನೀರು : ರಾಜಶೇಖರ ಹಿಟ್ನಾಳ ಲಿಂಕ್ ವಿಳಾಸ https://dekalungi.blogspot.com/2017/05/blog-post_2.html
0 Response to "ಭಗೀರಥರ ಪ್ರಯತ್ನದಿಂದ ಭೂಲೋಕದ ಜೀವರಾಶಿಗೆ ನೀರು : ರಾಜಶೇಖರ ಹಿಟ್ನಾಳ"
ಕಾಮೆಂಟ್ ಪೋಸ್ಟ್ ಮಾಡಿ