ಶೀರ್ಷಿಕೆ : ನವಲಿಯ ಕೂಲಿಕಾರರಿಗೆ ನರೇಗಾದಡಿ ಉದ್ಯೋಗ : ಕೆರೆ ಅಭಿವೃದ್ಧಿ ಕೆಲಸ ಪ್ರಾರಂಭ
ಲಿಂಕ್ : ನವಲಿಯ ಕೂಲಿಕಾರರಿಗೆ ನರೇಗಾದಡಿ ಉದ್ಯೋಗ : ಕೆರೆ ಅಭಿವೃದ್ಧಿ ಕೆಲಸ ಪ್ರಾರಂಭ
ನವಲಿಯ ಕೂಲಿಕಾರರಿಗೆ ನರೇಗಾದಡಿ ಉದ್ಯೋಗ : ಕೆರೆ ಅಭಿವೃದ್ಧಿ ಕೆಲಸ ಪ್ರಾರಂಭ
ಕೊಪ್ಪಳ ಮೇ. 05 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಪ್ರಸ್ತುತ ವರ್ಷದಲ್ಲಿ ಬೀಕರ ಬರಗಾಲ ಉದ್ಬವಿಸುವ ಕಾರಣಗ್ರಾಮಸ್ಧರು ಕೆಲಸ ಅರಸಿ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಗೆ ಗುಳೆ ಹೋಗದಂತೆ ಜಿಲ್ಲಾ ಪಂಚಾಯತಿಯಿಂದ ಮುಂಜಾಗೃತೆ ವಹಿಸಿ ಗಂಗಾವತಿ ತಾಲೂಕಿನಲ್ಲಿ ತುರ್ತಾಗಿ ಮೇ. 04 ರಂದು ನವಲಿ ಗ್ರಾಮ ಪಂಚಾಯತಿಯ 250 ಕೂಲಿಕಾರರಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಆಧಾಪುರಕೆರೆಯಲ್ಲಿ ಕೆಲಸ ನೀಡಲಾಗಿದೆ.
ಈ ಕೆರೆಅಭಿವೃದ್ಧಿ ಅಂದಾಜು ಮೊತ್ತ ರೂ.20.00 ಲಕ್ಷ ವಿದ್ದು ಈ ವರ್ಷದಲ್ಲಿ ಈಗಾಗಲೇ ನವಲಿ ಗ್ರಾಮದಲ್ಲಿ 1536 ಮಾನವದಿನಗಳನ್ನು ಸೃಜೀಸಲಾಗಿದೆ. ಸಕಾಲದಲ್ಲಿ ಕೂಲಿಕಾರರ ಬ್ಯಾಂಕ್ ಖಾತೆಗೆ ನೇರವಾಗಿ ಕೂಲಿಕಾರರಿಗೆ ಹಣಪಾವತಿ ಮಾಡಲಾಗಿದೆ.
ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಹೆಚ್.ಚಿತ್ರಗಾರ, ನವಲಿ ಪಿಡಿಒ ನಾಗೇಶ ಅವರು ನವಲಿ ತಾಂಡದಲ್ಲಿ ಗುಳೆ ಹೋದ ಮನೆಗಳಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದು, ರೋಜಗಾರ ದಿವಸ ಆಚರಿಸಿ ನಮೂನೆ-6ರಲ್ಲಿ ಕೆಲಸಕ್ಕಾಗಿ ಅರ್ಜಿಯನ್ನು ಪಡೆದು ಮರು ದಿನವೆ ಎಲ್ಲಾ ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ಈ ಗ್ರಾಮದಲ್ಲಿ ಅರ್ಜಿ ಸಲ್ಲಿಸಿದ ಕೂಲಿಕಾರರಿಗೆ ಕೃಷಿಹೊಂಡ, ನಮ್ಮ ಹೊಲ ನಮ್ಮ ದಾರಿ, ಆಟದ ಮೈದಾನ ಅಭಿವೃದ್ಧಿ ಕೆಲಸ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ಗ್ರಾಮ ಪಂಚಾಯತಿಯಲ್ಲಿ ಹೆಚ್ಚಿನ ಮಾನವದಿನಗಳನ್ನು ಸೃಜಿಸಲಾಗುವುದು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ತಾಂತ್ರಿಕ ಸಂಯೋಜಕರು ಉಪಸ್ಥಿತರಿದ್ದರು.
ಕೊಪ್ಪಳ ಜಿಲ್ಲಾ ಪಂಚಾಯತ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಈ ವರ್ಷದಲ್ಲಿ ಕೂಲಿಕಾರರಿಗೆ ಕೆರೆಅಭಿವೃಧ್ಧಿ ಕೃಷಿ ಹೊಂಡ, ನಮ್ಮ ಹೊಲ ನಮ್ಮ ದಾರಿ, ಆಟದ ಮೈದಾನ ಅಭಿವೃದ್ಧಿ ಕೆಲಸ ನೀಡಲಾಗುತ್ತಿದೆ. ಯಾವ ಕೂಲಿಕಾರರು ಗುಳೆ ಹೋಗದೆ ಸ್ಥಳೀಯವಾಗಿ ಗ್ರಾಮ ಪಂಚಾಯತಿಯಲ್ಲಿ ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಿ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿಕಾರರು ಕೆಲಸ ನಿರ್ವಹಿಸಬಹುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ನವಲಿಯ ಕೂಲಿಕಾರರಿಗೆ ನರೇಗಾದಡಿ ಉದ್ಯೋಗ : ಕೆರೆ ಅಭಿವೃದ್ಧಿ ಕೆಲಸ ಪ್ರಾರಂಭ
ಎಲ್ಲಾ ಲೇಖನಗಳು ಆಗಿದೆ ನವಲಿಯ ಕೂಲಿಕಾರರಿಗೆ ನರೇಗಾದಡಿ ಉದ್ಯೋಗ : ಕೆರೆ ಅಭಿವೃದ್ಧಿ ಕೆಲಸ ಪ್ರಾರಂಭ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ನವಲಿಯ ಕೂಲಿಕಾರರಿಗೆ ನರೇಗಾದಡಿ ಉದ್ಯೋಗ : ಕೆರೆ ಅಭಿವೃದ್ಧಿ ಕೆಲಸ ಪ್ರಾರಂಭ ಲಿಂಕ್ ವಿಳಾಸ https://dekalungi.blogspot.com/2017/05/blog-post_19.html
0 Response to "ನವಲಿಯ ಕೂಲಿಕಾರರಿಗೆ ನರೇಗಾದಡಿ ಉದ್ಯೋಗ : ಕೆರೆ ಅಭಿವೃದ್ಧಿ ಕೆಲಸ ಪ್ರಾರಂಭ"
ಕಾಮೆಂಟ್ ಪೋಸ್ಟ್ ಮಾಡಿ