2nd round news and photos date: 6-5-2017

2nd round news and photos date: 6-5-2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು 2nd round news and photos date: 6-5-2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : 2nd round news and photos date: 6-5-2017
ಲಿಂಕ್ : 2nd round news and photos date: 6-5-2017

ಓದಿ


2nd round news and photos date: 6-5-2017

ವಿಜ್ಞಾನ ಕೇಂದ್ರಕ್ಕೆ ನಾಗರಿಕರನ್ನು ಆಕರ್ಷಿಸಲು ಸಲಹೆ
****************************************************
ಕಲಬುರಗಿ,ಮೇ.06.(ಕ.ವಾ.)-ಜಿಲ್ಲಾ ವಿಜ್ಞಾನ ಕೇಂದ್ರದ ಮುಂಭಾಗದ ಪ್ರವೇಶ ದ್ವಾರದ ಹತ್ತಿರ ವಿಜ್ಞಾನ ಕೇಂದ್ರದ ಸೌಲಭ್ಯಗಳ ಆಕರ್ಷಕ ಮಾಹಿತಿ ಫಲಕಗಳನ್ನು ಅಳವಡಿಸುವ ಮೂಲಕ ವಿಜ್ಞಾನ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಮತ್ತು ನಾಗರಿಕರನ್ನು ಆಕರ್ಷಿಸಬೇಕೆಂದು ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಅವರು ಶನಿವಾರ ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ವಿಜ್ಞಾನ ಕೇಂದ್ರದ ಮೂಲ ಅವಶ್ಯಕತೆಗಳ ಪಟ್ಟಿಮಾಡಿ ಮನವಿ ಸಲ್ಲಿಸಿದ್ದಲ್ಲಿ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ಧನಸಹಾಯ ಪಡೆಯಲಾಗುವುದು ಎಂದರು.
ವಿಜ್ಞಾನ ಕೇಂದ್ರದಲ್ಲಿ ಸೈನ್ಸ್ ಆನ್ ಸ್ಪೀಯರ್ ಹಾಗೂ ಹ್ಯೂಮನ್ ಬಯಾಲಜಿ ವಿಭಾಗ ಪ್ರಾರಂಭಿಸಲು, ವಿಕಲಚೇತನರಿಗಾಗಿ ಲಿಫ್ಟ್ ವ್ಯವಸ್ಥೆಗಾಗಿ ಬೇಡಿಕೆಯನ್ನು ಸಲ್ಲಿಸುವಂತೆ ಜಿಲ್ಲಾ ವಿಜ್ಞಾನಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಮಾತನಾಡಿ, ವಿಜ್ಞಾನ ಕೇಂದ್ರಕ್ಕೆ ಗ್ರಾಮಾಂತರ ಪ್ರದೇಶದ ಮಕ್ಕಳು ಬರುವಂತಾಗಬೇಕು. ಜಿಲ್ಲೆಯ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಮೊರಾರ್ಜಿ ದೇಸಾಯಿ ಶಾಲೆಗಳ ಮಕ್ಕಳು ಕಡ್ಡಾಯವಾಗಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡುವಂತೆ ಕ್ರಮ ಜರುಗಿಸಬೇಕು. ಮಕ್ಕಳನ್ನು ಶಾಲೆಗಳಿಂದ ವಿಜ್ಞಾನ ಕೇಂದ್ರಕ್ಕೆ ಕರೆದುಕೊಂಡು ಬರುವ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ವಿಜ್ಞಾನಾಧಿಕಾರಿ ಲಕ್ಷ್ಮೀ ನಾರಾಯಣ ಮಾತನಾಡಿ, ವಿಜ್ಞಾನ ಕೇಂದ್ರದಲ್ಲಿ ಇನೋವೇಷನ್ ಕಾರ್ನರ್ ವಿಭಾಗವನ್ನು ಪ್ರಾರಂಭಿಸಲಾಗುತ್ತಿದೆ. ವಿಜ್ಞಾನ ಸಂಶೋಧನಾ ವಿದ್ಯಾರ್ಥಿಗಳಿಗೆ ತಾವು ಮಾಡಿರುವ ಸಂಶೋಧನೆಯನ್ನು ಅಭಿವೃದ್ಧಿಗೊಳಿಸಲು ಸಹಾಯ ಮಾಡಲಾಗುವುದು. ಸಂಶೋಧನಾ ವಿದ್ಯಾರ್ಥಿಗಳಿಂದ 500 ರೂ.ಗಳ ಶುಲ್ಕವನ್ನು ಪಡೆದು ಸಂಶೋಧನೆಗೆ ಅವಶ್ಯಕವಿರುವ ಎಲ್ಲ ಸವಲತ್ತುಗಳನ್ನು ಮತ್ತು ಮಾರ್ಗದರ್ಶನವನ್ನು ನೀಡಲಾಗುವುದು ಎಂದರು.
1984ರ ಜನವರಿ 6ರಂದು ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರವು ಒಂದು ಎಕ್ಸಿಬಿಷನ್ ಹಾಲ್‍ದೊಂದಿಗೆ ಪ್ರಾರಂಭವಾಗಿತ್ತು. ದಕ್ಷಿಣ ಭಾರತದ ಪ್ರಥಮ ವಿಜ್ಞಾನ ಕೇಂದ್ರ ಇದಾಗಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಸಹಾಯಕಾರಿಯಾಗಿದೆ. ಸಧ್ಯ ವಿಜ್ಞಾನ ಕೇಂದ್ರದಲ್ಲಿ ಮೋಜಿನ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಪಾಪುಲರ್ ಸೈನ್ಸ್ ಹಾಗೂ ಮೆಥಮೆಟಿಕ್ಸ್ ಒಳಗೊಂಡಂತೆ ನಾಲ್ಕು ಪ್ರದರ್ಶನಾಲಯಗಳಿದ್ದು, ಸುಮಾರು 400ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆಗಳಿವೆ. 2009ರಲ್ಲಿ 3ಡಿ
ಥೇಟರ್, 2010ರಲ್ಲಿ ಡಿಜಿಟಲ್ ಪ್ಲಾನಿಟೋರಿಯಂ ಮತ್ತು ಡೈನೋಸಾರ್ ಪಾರ್ಕ್ ಪ್ರಾರಂಭಿಸಲಾಗಿದೆ. ಕೇಂದ್ರವು 54 ಪ್ರಾತ್ಯಕ್ಷಿಕೆಗಳುಳ್ಳ ಸೈನ್ಸ್ ಪಾರ್ಕ್, ಮಿರರ್ ಮೇಜ್, ಮೂರು ಟೆಲಿಸ್ಕೋಪ್ ಹಾಗೂ ಮೊಬೈಲ್ ಸೈನ್ಸ್ ಎಕ್ಸಿಬಿಷನ್ ವ್ಯಾನ್ ಒಳಗೊಂಡಿದೆ ಎಂದು ವಿವರಿಸಿದರು.
ಸಭೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಶಿಕ್ಷಣಾಧಿಕಾರಿ ವೆಂಕಟೇಶ್ವರಲು ಆರ್. ಪಾಲ್ಗೊಂಡಿದ್ದರು.

ಜಿಲ್ಲಾ ವ್ಯವಸ್ಥಾಪಕ ಹುದ್ದೆ ನೇಮಕಾತಿಗೆ ತಡೆಯಾಜ್ಞೆ
***************************************************
ಕಲಬುರಗಿ,ಮೇ.06.(ಕ.ವಾ.)-ಗ್ರಾಮೀಣ ವಸತಿ ಯೋಜನೆ ನಿರ್ವಹಣೆಗಾಗಿ ಜಿಲ್ಲಾ ವ್ಯವಸ್ಥಾಪಕ ಹುದ್ದೆಯ ಸೇವೆಯನ್ನು ಮ್ಯಾನ್ ಪವರ್ ಏಜೆನ್ಸಿ ಮೂಲಕ ತಾತ್ಕಾಲಿಕವಾಗಿ ಪಡೆಯಲು ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸದರಿ ಜಿಲ್ಲಾ ವ್ಯವಸ್ಥಾಪಕರ ಹುದ್ದೆ ನೇಮಕಾತಿಗೆ ಉಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ ಮತ್ತು ವಾಕ್ ಇನ್ ಇಂಟರ್‍ವ್ಯೂ ಮಾಡದಿರಲು ಸೂಚಿಸಿದೆ. ಅದರಂತೆ ಮುಂದಿನ ಆದೇಶ ಬರುವವರೆಗೆ ಈ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.




ಹೀಗಾಗಿ ಲೇಖನಗಳು 2nd round news and photos date: 6-5-2017

ಎಲ್ಲಾ ಲೇಖನಗಳು ಆಗಿದೆ 2nd round news and photos date: 6-5-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ 2nd round news and photos date: 6-5-2017 ಲಿಂಕ್ ವಿಳಾಸ https://dekalungi.blogspot.com/2017/05/2nd-round-news-and-photos-date-6-5-2017.html

Subscribe to receive free email updates:

0 Response to "2nd round news and photos date: 6-5-2017"

ಕಾಮೆಂಟ್‌‌ ಪೋಸ್ಟ್‌ ಮಾಡಿ