ಶೀರ್ಷಿಕೆ : ಮೇ. 20 ರಂದು ಕೃಷಿ ಸಂಬಂಧಿತ ಕೋರ್ಸ್‍ಗಳ ಪ್ರವೇಶಕ್ಕೆ ಪ್ರಾಯೋಗಿಕ ಪರೀಕ್ಷೆ
ಲಿಂಕ್ : ಮೇ. 20 ರಂದು ಕೃಷಿ ಸಂಬಂಧಿತ ಕೋರ್ಸ್‍ಗಳ ಪ್ರವೇಶಕ್ಕೆ ಪ್ರಾಯೋಗಿಕ ಪರೀಕ್ಷೆ
ಮೇ. 20 ರಂದು ಕೃಷಿ ಸಂಬಂಧಿತ ಕೋರ್ಸ್‍ಗಳ ಪ್ರವೇಶಕ್ಕೆ ಪ್ರಾಯೋಗಿಕ ಪರೀಕ್ಷೆ
ಕೊಪ್ಪಳ, ಮೇ. 05 (ಕರ್ನಾಟಕ ವಾರ್ತೆ): ಬಿ.ಎಸ್.ಸಿ. (ಕೃಷಿ)/ (ತೋ) ಮತ್ತು ಕೃಷಿ ಸಂಬಂಧಿತ ಕೋರ್ಸ್‍ಗಳಿಗೆ ರೈತರ/ ವ್ಯವಸಾಯಗಾರರ/ ರೈತ ಕಾರ್ಮಿಕರ ಕೋಟಾದಡಿಯಲ್ಲಿ ಪ್ರವೇಶ ಬಯಸುವವರಿಗೆ ತೋಟಗಾರಿಕೆ ಮಹಾವಿದ್ಯಾಲಯ ಕೊಪ್ಪಳ (ಮುನಿರಾಬಾದ್) ದಲ್ಲಿ ಮೇ. 20 ರಂದು ಬೆಳಿಗ್ಗೆ 10-00 ಗಂಟೆಗೆ ಪ್ರಾಯೋಗಿಕ ಪರೀಕ್ಷೆ (ಪ್ರಾಕ್ಟಿಕಲ್ ಟೆಸ್ಟ್) ಯನ್ನು ನಡೆಸಲಾಗುವುದು.
ಪ್ರಾಯೋಗಿಕ ಪರೀಕ್ಷೆ (ಪ್ರಾಕ್ಟಿಕಲ್ ಟೆಸ್ಟ್) ಯಲ್ಲಿ ಭಾಗವಹಿಸಲು, ಮೇ. 05 ರಿಂದ 17 ರೊಳಗಾಗಿ (ಭಾನುವಾರ ಸಹಿತ) ಸಮಯ ಬೆಳಿಗ್ಗೆ 09-00 ಯಿಂದ ಮಧ್ಯಾಹ್ನ 3-30 ಗಂಟೆಯವರೆಗೆ ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಮೂಲಕ ದಾಖಲಾತಿಗಳೊಂದಿಗೆ ಅಭ್ಯರ್ಥಿ/ ಪೋಷಕರು ದಾಖಲೆಗಳ ಪರಿಶೀಲನಾ ಸಮಿತಿ ಮುಂದೆ ಹಾಜರಾಗಿ ದೃಢೀಕರಣ ಪತ್ರ ಪಡೆಯಬೇಕು. ತಮ್ಮ ಸ್ವಂತ ಜಿಲ್ಲೆ ಬರುವ ಕೇಂದ್ರವನ್ನು ಬಿಟ್ಟು ಬೇರೆ ಕೇಂದ್ರವನ್ನು ಆರಿಸಿಕೊಂಡಿರುವ ವಿದ್ಯಾರ್ಥಿಗಳು, ಪರಿಶೀಲನೆಗೆ ಬಂದಾಗ ಅವರ ಜಿಲ್ಲೆ ಬರುವ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು. ಯಾವ ಕೇಂದ್ರದಲ್ಲಿ ದಾಖಲಾತಿಗಳನ್ನು ಪರಿಶೀಲಿಸಲಾಗುತ್ತದೆಯೋ ಆ ಕೇಂದ್ರದಲ್ಲಿಯೇ ಪ್ರಾಯೋಗಿಕ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕು. ನಿಗದಿಪಡಿಸಿರುವ ದಿನಾಂಕದೊಳಗೆ ಎಲ್ಲಾ ಪ್ರಮಾಣ ಪತ್ರಗಳೊಂದಿಗೆ (ಮೇ. 05 ರಿಂದ 17 ರೊಳಗಾಗಿ) ಪರಿಶೀಲನೆಗೆ ಹಾಜರಾಗಬೇಕು. ಒಂದು ವೇಳೆ ಪ್ರಮಾಣ ಪತ್ರಗಳನ್ನು ತಪಾಸಣೆ ಮಾಡಿಸಿಕೊಳ್ಳದಿದ್ದಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಅನುಮತಿ ನೀಡುವುದಿಲ್ಲ. ಪರಿಶೀಲನೆ ನಂತರ ನೀಡುವ ದೃಢೀಕರಣ ಪತ್ರ ಹಾಗೂ ಸಿಇಟಿ ಹಾಲ್‍ಟಿಕೆಟ್‍ಗಳೊಂದಿಗೆ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಬೇಕು. ನೀಲಿ ಅಥವಾ ಕಪ್ಪು ಬಾಲ್ ಪಾಯಿಂಟ್ ಪೆನ್ನು ತರಬೇಕು. ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಮೊಬೈಲ್ ನಿಷೇದಿಸಲಾಗಿದೆ.
ಪರಿಶೀಲನೆಗೆ ತರಬೇಕಾದ ಮೂಲದಾಖಲೆಗಳು, ಸಿಇಟಿ ಪರೀಕ್ಷಾ ಪ್ರವೇಶ ಪತ್ರ (ಹಾಲ್‍ಟಿಕೆಟ್), ವ್ಯವಸಾಯಗಾರರ ಪ್ರಮಾಣ ಪತ್ರ-3 (ಅವಿಭಾಜ್ಯ ಕುಟುಂಬವಾದಲ್ಲಿ ಕಂದಾಯ ಇಲಾಖೆಯಿಂದ ಒದಗಿಸುವ ವಂಶವೃಕ್ಷ ಪ್ರಮಾಣ ಪತ್ರ), ವೇತನ ದೃಢೀಕರಣ ಪ್ರಮಾಣಪತ್ರ-4 (ಜೊತೆಗೆ ನೌಕರಿಯಿದ್ದಲ್ಲಿ), ಖಾಸಗಿ ವೃತ್ತಿಯಿಂದ ಆದಾಯ ಪತ್ರ-5 (ಜೊತೆಗೆ ಸ್ವಂತ ವ್ಯವಹಾರವಿದ್ದಲ್ಲಿ), ಅಫಿಡವಿಟ್, ಡಿಮಾಂಡ್ ಡ್ರಾಫ್ಟ್ (ಡಿಡಿ) ಸಾಮಾನ್ಯ ಮತ್ತು ಓಬಿಸಿ ವರ್ಗದವರಿಗೆ ರೂ.500, ಪ.ಜಾ/ಪ.ಪ/ ಪ್ರವರ್ಗ-1 ವರ್ಗದವರಿಗೆ ರೂ.250, ಶುಲ್ಕವನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕ್‍ನಿಂದ ಡಿ.ಡಿ. ರೂಪದಲ್ಲಿ ಹಣಕಾಸು ನಿಯಂತ್ರಣಾಧಿಕಾರಿಗಳು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಇವರ ಹೆಸರಲ್ಲಿ ಮೇ. 05 ರಿಂದ 17 ರ ಅವಧಿಯೊಳಗಾಗಿ ಪಡೆಯಬೇಕು.
ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಅಭ್ಯರ್ಥಿಗಳಿಗೆ ಪರೀಕ್ಷೆಯು ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯ ಕೇಂದ್ರದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 9480696399 & 8970736828 ತೋಟಗಾರಿಕೆ ಮಹಾವಿದ್ಯಾಲಯ ಮುನಿರಾಬಾದ್ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಮೇ. 20 ರಂದು ಕೃಷಿ ಸಂಬಂಧಿತ ಕೋರ್ಸ್‍ಗಳ ಪ್ರವೇಶಕ್ಕೆ ಪ್ರಾಯೋಗಿಕ ಪರೀಕ್ಷೆ
ಎಲ್ಲಾ ಲೇಖನಗಳು ಆಗಿದೆ ಮೇ. 20 ರಂದು ಕೃಷಿ ಸಂಬಂಧಿತ ಕೋರ್ಸ್‍ಗಳ ಪ್ರವೇಶಕ್ಕೆ ಪ್ರಾಯೋಗಿಕ ಪರೀಕ್ಷೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮೇ. 20 ರಂದು ಕೃಷಿ ಸಂಬಂಧಿತ ಕೋರ್ಸ್‍ಗಳ ಪ್ರವೇಶಕ್ಕೆ ಪ್ರಾಯೋಗಿಕ ಪರೀಕ್ಷೆ ಲಿಂಕ್ ವಿಳಾಸ https://dekalungi.blogspot.com/2017/05/20.html
0 Response to "ಮೇ. 20 ರಂದು ಕೃಷಿ ಸಂಬಂಧಿತ ಕೋರ್ಸ್‍ಗಳ ಪ್ರವೇಶಕ್ಕೆ ಪ್ರಾಯೋಗಿಕ ಪರೀಕ್ಷೆ"
ಕಾಮೆಂಟ್ ಪೋಸ್ಟ್ ಮಾಡಿ