ಶೀರ್ಷಿಕೆ : ಕೊಪ್ಪಳ : ಉದ್ಯೋಗ ಖಾತ್ರಿ ಯೋಜನೆಯಡಿ 1280 ಕುಟುಂಬಗಳಿಗೆ ಕೆಲಸ
ಲಿಂಕ್ : ಕೊಪ್ಪಳ : ಉದ್ಯೋಗ ಖಾತ್ರಿ ಯೋಜನೆಯಡಿ 1280 ಕುಟುಂಬಗಳಿಗೆ ಕೆಲಸ
ಕೊಪ್ಪಳ : ಉದ್ಯೋಗ ಖಾತ್ರಿ ಯೋಜನೆಯಡಿ 1280 ಕುಟುಂಬಗಳಿಗೆ ಕೆಲಸ
ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ಬರ ಪರಿಸ್ಥಿತಿ ಇದ್ದು, ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ಥಳೀಯವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಆದ್ಯತೆ ನೀಡಲಾಗುತ್ತಿದೆ. ಕೂಲಿಕಾರರು ಕೂಲಿ ಬಯಸಿ ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಕೂಲಿ ಕೆಲಸ ನೀಡಬೇಕಾಗಿರುವದರಿಂದ ತಾಲೂಕಿನ ಗ್ರಾ.ಪಂ. ಗಳಲ್ಲಿ ಸಮುದಾಯಿಕ ಕಾಮಗಾರಿಗಳಾದ ಕೆರೆ ಹೂಳೆತ್ತುವ, ಕೃಷಿಹೊಂಡ ನಿರ್ಮಾಣ, ಸ್ಮಶಾನ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಸದ್ಯ ಅಳವಂಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ-331, ಬೆಟಗೇರಿ-83, ಇರಕಲ್ಲಗಡಾ-77, ಕವಲೂರು-1123, ಬೂದಗುಂಪಾ, ಹುಲಗಿ-319, ಹಿಟ್ನಾಳ-85, ಮುನಿರಾಬಾದ ಡ್ಯಾಂ-33, ಬಹದ್ದೂರಬಂಡಿ-511 ಕೂಲಿಕಾರರು ಕೂಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಬರಗಾಲ ಇರುವುದರಿಂದ ಯಾವುದೇ ಕಾರಣಕ್ಕೂ ಕೂಲಿಕಾರರು ಕೂಲಿ ಬಯಸಿ ಬೇರೆ ಕಡೆ ಗುಳೆ ಹೋಗುವುದನ್ನು ತಪ್ಪಿಸಲು ಕೂಲಿಕಾರರಿಗೆ ಕೂಲಿ ಕೆಲಸ ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಿರುವ ಕೂಲಿಕಾರರಿಗೆ ಕೂಲಿ ಕೆಲಸ ನೀಡುವುದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯವಾಗಿದೆ. ತಪ್ಪಿದ್ದಲ್ಲಿ ಸಂಬಂಧಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಈಗಾಗಲೇ ತಾಲೂಕಿನಲ್ಲಿ 22520 ಮಾನವ ದಿನಗಳನ್ನು ಸೃಜಿಸಿದ್ದು 1280 ಕುಟುಂಬಗಳಿಗೆ ಕೂಲಿ ಕೆಲಸ ನೀಡಲಾಗಿದೆ. ಕಾಯಕ ಬಂಧುಗಳ ಮೂಲಕ ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ. ಕೂಲಿ ಕೆಲಸ ಬಯಸುವ ಕೂಲಿಕಾರರು ತಮ್ಮ ಹತ್ತಿರದ ಗ್ರಾ.ಪಂ. ಗೆ ಸಂಪರ್ಕಿಸಿ ನಮೂನೆ-6 ರಲ್ಲಿ ಕೂಲಿ ಕೆಲಸ ಬಯಸಿ ಅರ್ಜಿ ಸಲ್ಲಿಸಬಹುದು ಎಂದು ಕೊಪ್ಪಳ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಕೊಪ್ಪಳ : ಉದ್ಯೋಗ ಖಾತ್ರಿ ಯೋಜನೆಯಡಿ 1280 ಕುಟುಂಬಗಳಿಗೆ ಕೆಲಸ
ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ : ಉದ್ಯೋಗ ಖಾತ್ರಿ ಯೋಜನೆಯಡಿ 1280 ಕುಟುಂಬಗಳಿಗೆ ಕೆಲಸ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ : ಉದ್ಯೋಗ ಖಾತ್ರಿ ಯೋಜನೆಯಡಿ 1280 ಕುಟುಂಬಗಳಿಗೆ ಕೆಲಸ ಲಿಂಕ್ ವಿಳಾಸ https://dekalungi.blogspot.com/2017/05/1280.html
0 Response to "ಕೊಪ್ಪಳ : ಉದ್ಯೋಗ ಖಾತ್ರಿ ಯೋಜನೆಯಡಿ 1280 ಕುಟುಂಬಗಳಿಗೆ ಕೆಲಸ"
ಕಾಮೆಂಟ್ ಪೋಸ್ಟ್ ಮಾಡಿ