ಶೀರ್ಷಿಕೆ : ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ
ಲಿಂಕ್ : ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ
ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ
Accident near Arsikere - 1 Died, 20 injured
ಗೋಕರ್ಣದಿಂದ ಬೆಂಗಳೂರಿಗೆ ಹೋಗುತ್ತಿದ್ದ ಶ್ರೀಕುಮಾರ್ ಟ್ರಾವಲ್ಸ್ ಗೆ ಸೇರಿದ ಖಾಸಗಿ ಸಾರಿಗೆ ಬಸ್ಸು ಅರಸೀಕೆರೆ ಕಸಬಾ ಹೋಬಳಿ ಕಲ್ಲನಾಯ್ಕನಹಳ್ಳಿ ಗೇಟ್ ಬಳಿ (ಕಾಫಿ ಡೇ ಹತ್ತಿರ) ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಇಂದು ಮುಂಜಾನೆ ಸುಮಾರು 4 ಗಂಟೆಯ ಸಮಯದಲ್ಲಿ ರಸ್ತೆಬದಿಯಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಬಸ್ ಚಾಲಕ ಸಿದ್ದಾಪುರ ಮೂಲದ ಮಂಜುನಾಥ ನಾಯಕ್ (38 ವರ್ಷ) ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಬಸ್ಸಿನಲ್ಲಿದ್ದ 20 ಜನ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಮತ್ತು ಬೆಂಗಳೂರಿಗೆ ಕಳಿಸಿಕೊಡಲಾಗಿದೆ.
ಈ ಅಪಘಾತಕ್ಕೆ ಬಸ್ಸಿನ ಚಾಲಕರಿಗೆ ನಿದ್ರೆ ಮಂಪರು ಕಾರಣ ಎಂದು ಊಹಿಸಲಾಗಿದೆ. ಬಸ್ಸು ಸಂಪೂರ್ಣವಾಗಿ ರಸ್ತೆಯ ಬಲಭಾಗಕ್ಕೆ ಬಂದು ಮರಕ್ಕೆ ಗುದ್ದಿದೆ. ಬಸ್ ಡಿಕ್ಕಿ ಹೊಡೆದದ್ದರಿಂದ ರಸ್ತೆಬದಿಯ ಮರ ಸಂಪೂರ್ಣ ಬುಡಮೇಲಾಗಿದೆ ಎಂದರೆ, ಬಸ್ಸಿನ ವೇಗ ಎಷ್ಟಿರಬಹುದೆಂದು ಅಂದಾಜಿಸಬಹುದು.
ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಚಿತ್ರ ಮಾಹಿತಿ : ಪೊಲೀಸ್ ಇಲಾಖೆ, ಅರಸೀಕೆರೆ)
ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ |
ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ |
ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ |
ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ |
ಹೀಗಾಗಿ ಲೇಖನಗಳು ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ
ಎಲ್ಲಾ ಲೇಖನಗಳು ಆಗಿದೆ ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ ಲಿಂಕ್ ವಿಳಾಸ https://dekalungi.blogspot.com/2017/05/1-20.html
0 Response to "ಅರಸೀಕೆರೆ ಬಳಿ ರಸ್ತೆ ಅಪಘಾತ - 1 ಸಾವು, 20 ಜನರಿಗೆ ಗಾಯ"
ಕಾಮೆಂಟ್ ಪೋಸ್ಟ್ ಮಾಡಿ