ಶೀರ್ಷಿಕೆ : ಭರ್ಜರಿ ಯಶಸ್ವಿಯೊಂದಿಗೆ ಮಾವು ಮೇಳಕ್ಕೆ ತೆರೆ : ಸುಮಾರು 01 ಕೋಟಿ ರೂ. ವಹಿವಾಟು
ಲಿಂಕ್ : ಭರ್ಜರಿ ಯಶಸ್ವಿಯೊಂದಿಗೆ ಮಾವು ಮೇಳಕ್ಕೆ ತೆರೆ : ಸುಮಾರು 01 ಕೋಟಿ ರೂ. ವಹಿವಾಟು
ಭರ್ಜರಿ ಯಶಸ್ವಿಯೊಂದಿಗೆ ಮಾವು ಮೇಳಕ್ಕೆ ತೆರೆ : ಸುಮಾರು 01 ಕೋಟಿ ರೂ. ವಹಿವಾಟು
ಕೊಪ್ಪಳ ಮೇ. 18 (ಕರ್ನಾಟಕ ವಾರ್ತೆ): ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವಿನ ಹಣ್ಣಿನ ವಿವಿಧ ತಳಿಗಳ ಸವಿಯನ್ನು ಸವಿಯಲು ಕೊಪ್ಪಳದಲ್ಲಿ ಮೇ. 09 ರಂದು ಪ್ರಾರಂಭವಾಗಿದ್ದ ಮಾವು ಮೇಳ ಅವಕಾಶ ಕಲ್ಪಿಸಿಕೊಟ್ಟು, ಇದೀಗ ಮೇ. 18 ರಂದು ಬುಧವಾರ ಭರ್ಜರಿ ಯಶಸ್ವಿಯೊಂದಿಗೆ ತೆರೆ ಕಂಡಿದೆ. ಸುಮಾರು 01 ಕೋಟಿ ರೂ. ಗೂ ಹೆಚ್ಚು ವಹಿವಾಟು ಮೇಳದಲ್ಲಿ ದಾಖಲಾಗಿದೆ.
ತೋಟಗಾರಿಕೆ ಇಲಾಖೆ ಹಾಗೂ ರಾಜ್ಯ ಮಾವು ಮಾರುಕಟ್ಟೆ ಮತ್ತು ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಕೊಪ್ಪಳ ನಗರದಲ್ಲಿ ಮಾವು ಮೇಳ ಆಯೋಜಿಸಲಾಗಿತ್ತು. ಮೇ. 09 ರಿಂದ 18 ರವರೆಗೆ ಹತ್ತು ದಿನಗಳ ಕಾಲ ನಡೆದ ಮಾವು ಮೇಳದ ಸದಾವಕಾಶವನ್ನು ಕೊಪ್ಪಳ ಜಿಲ್ಲೆಯ ಜನತೆ ಚೆನ್ನಾಗಿಯೇ ಪಡೆದುಕೊಂಡಿತು. ಮಾವು ಮೇಳದ ಅಂಗವಾಗಿ ಸುಮಾರು 120 ಕ್ಕೂ ಹೆಚ್ಚು ವಿವಿಧ ತಳಿಗಳ ಮಾವಿನ ಹಣ್ಣುಗಳ ಪ್ರದರ್ಶನ ಯಶಸ್ವಿಯಾಗಿ ನಡೆಸಿ, ಜನಮನ್ನಣೆ ಪಡೆದುಕೊಂಡಿತು.
ಭರ್ಜರಿ ಯಶಸ್ಸಿನೊಂದಿಗೆ ಮೇ. 18 ರಂದು ಬುಧವಾರ ತೆರೆ ಕಂಡ ಮಾವು ಮೇಳದ ಸಮಾರೋಪ ಸಮಾರಂಭ ತೋಟಗಾರಿಕೆ ಇಲಾಖೆ ಆವರಣದಲ್ಲಿ ಏರ್ಪಡಿಸಲಾಯಿತು. ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ, ಸಂಸದ ಕರಡಿ ಸಂಗಣ್ಣ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಮಾರೋಪ ಸಮಾರಂಭ ಸಂದರ್ಭದಲ್ಲಿ ಮಾವು ಮೇಳಕ್ಕೆ ಭೇಟಿ ನೀಡಿ, ಕಾರ್ಯಕ್ರಮದ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಮಾವು ಮೇಳದ ಯಶಸ್ವಿಯ ಕುರಿತು ರೈತರು ಹಾಗೂ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು. ಮಾವು ಮೇಳದಲ್ಲಿ ಪಾಲ್ಗೊಂಡ ರೈತರು ಪ್ರತಿಕ್ರಿಯಿಸಿ, ಮಾವು ಮೇಳದ ಕಾರಣದಿಂದ ಯಾವುದೇ ಮದ್ಯವರ್ತಿಗಳ ಹಾವಳಿಯಿಲ್ಲದೆ, ನೇರವಾಗಿ ಗ್ರಾಹಕರಿಗೆ ಉತ್ತಮ ದರದಲ್ಲಿ ಹೆಚ್ಚಿನ ಪ್ರಮಾಣದ ಮಾವು ಮಾರಾಟ ಮಾಡುವ ಮೂಲಕ ಉತ್ತಮ ಲಾಭ ಪಡೆದುಕೊಂಡಿದ್ದೇವೆ. ಬರುವ ವರ್ಷ ಕನಿಷ್ಟ 01 ತಿಂಗಳಾದರೂ ಮಾವು ಮೇಳವನ್ನು ನಡೆಸಿದಲ್ಲಿ, ರೈತರಿಗೆ ಅನುಕೂಲವಾಗಲಿದೆ ಎಂದರು.
ಸಂಸದ ಕರಡಿ ಸಂಗಣ್ಣ ಅವರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು, ಈ ಬಾರಿ ಕೊಪ್ಪಳದಲ್ಲಿ ಏರ್ಪಡಿಸಿರುವ ಮಾವು ಮೇಳ ರೈತರಿಗೆ ಒಳ್ಳೆಯ ಉತ್ತೇಜನ ನೀಡಿದೆ ಎಂದರು. ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮಾತನಾಡಿ, ಕೊಪ್ಪಳದಲ್ಲಿ ಇಷ್ಟೊಂದು ತಳಿಗಳ ಮಾವಿನ ಹಣ್ಣನ್ನು ರೈತರು ಬೆಳೆಯುತ್ತಿದ್ದಾರೆ ಎಂದು ಗೊತ್ತಿರಲಿಲ್ಲ. ಮಾವು ಮೇಳದ ಕಾರಣದಿಂದಾಗಿ, ವೈವಿಧ್ಯಮಯ ತಳಿಗಳ ಮಾವಿನ ಹಣ್ಣು ಸವಿಯಲು ಸಾಧ್ಯವಾಯಿತು ಎಂದರು. ಅಲ್ಲದೆ ಮಾವು ಮೇಳದ ಯಶಸ್ವಿಗೆ ಸಹಕರಿಸಿದ ಎಲ್ಲ ರೈತರಿಗೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ಮಾತನಾಡಿ, ಮೇ. 09 ರಿಂದ ಪ್ರಾರಂಭವಾದ ಮಾವು ಮೇಳದಲ್ಲಿ ಸುಮಾರು 30 ರಿಂದ 32 ರೈತರು ಪಾಲ್ಗೊಂಡಿದ್ದು, ಅಂದಾಜು 90 ಟನ್ ನಷ್ಟು ಮಾವು ಮಾರಾಟವಾಗಿದೆ. ಸುಮಾರು 01 ಕೋಟಿ ರೂ. ಗಳಿಗೂ ಹೆಚ್ಚು ವಹಿವಾಟು ಮಾವು ಮೇಳದಲ್ಲಿ ನಡೆದಿದೆ. ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವು ಮಾರಾಟ ಮಾಡಿರುವುದರಿಂದ, ಮಧ್ಯವರ್ತಿಗಳ ಹಾವಳಿ ದೂರಾಗಿ, ರೈತರಿಗೆ ಯೋಗ್ಯ ಬೆಲೆ ದೊರಕಿದೆ. ಮೇಳದ ಮೂಲಕ ನೈಸರ್ಗಿಕವಾಗಿ ಮಾಗಿಸಿದ ಹಣ್ಣಿನ ಬಗ್ಗೆ ಗ್ರಾಹಕರಿಗೂ ಅರಿವು ಮೂಡಿಸಿದಂತಾಗಿದೆ. ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಣ್ಣಿನ ರಸ ಮಾಡಿ ಮಾರಾಟ ಮಾಡಿದ್ದು, ಮೌಲ್ಯವರ್ಧನೆ ಬಗ್ಗೆ ರೈತರಿಗೆ ತಿಳುವಳಿಕೆ ನೀಡಲಾಗಿದೆ. ರಾಜ್ಯಾದ್ಯಂತ ಬೆಳೆಯುವ 120ಕ್ಕೂ ಹೆಚ್ಚಿನ ತಳಿಗಳ ಪ್ರದರ್ಶನ ಮತ್ತು ತಳಿಗಳ ಮಾರಾಟ ಕುರಿತು ರೈತರು ಮಾಹಿತಿ ಪಡೆಯಲು ಮೇಳವು ಉತ್ತಮ ವೇದಿಕೆಯಾಯಿತು ಎಂದರು.
ಕಾರ್ಯಕ್ರಮದಲ್ಲಿ, ತೋಟಗಾರಿಕೆ ಇಲಾಖೆಗಳ ವಿವಿಧ ಅಧಿಕಾರಿಗಳು, ರೈತರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಹೀಗಾಗಿ ಲೇಖನಗಳು ಭರ್ಜರಿ ಯಶಸ್ವಿಯೊಂದಿಗೆ ಮಾವು ಮೇಳಕ್ಕೆ ತೆರೆ : ಸುಮಾರು 01 ಕೋಟಿ ರೂ. ವಹಿವಾಟು
ಎಲ್ಲಾ ಲೇಖನಗಳು ಆಗಿದೆ ಭರ್ಜರಿ ಯಶಸ್ವಿಯೊಂದಿಗೆ ಮಾವು ಮೇಳಕ್ಕೆ ತೆರೆ : ಸುಮಾರು 01 ಕೋಟಿ ರೂ. ವಹಿವಾಟು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಭರ್ಜರಿ ಯಶಸ್ವಿಯೊಂದಿಗೆ ಮಾವು ಮೇಳಕ್ಕೆ ತೆರೆ : ಸುಮಾರು 01 ಕೋಟಿ ರೂ. ವಹಿವಾಟು ಲಿಂಕ್ ವಿಳಾಸ https://dekalungi.blogspot.com/2017/05/01.html
0 Response to "ಭರ್ಜರಿ ಯಶಸ್ವಿಯೊಂದಿಗೆ ಮಾವು ಮೇಳಕ್ಕೆ ತೆರೆ : ಸುಮಾರು 01 ಕೋಟಿ ರೂ. ವಹಿವಾಟು"
ಕಾಮೆಂಟ್ ಪೋಸ್ಟ್ ಮಾಡಿ