ಶೀರ್ಷಿಕೆ : ಒಣಬೇಸಾಯ ಸಂಶೋಧನಾ ಕೇಂದ್ರ ಮಂಜೂರು- ಸಂಸದ ಕರಡಿ ಸಂಗಣ್ಣ ಹರ್ಷ
ಲಿಂಕ್ : ಒಣಬೇಸಾಯ ಸಂಶೋಧನಾ ಕೇಂದ್ರ ಮಂಜೂರು- ಸಂಸದ ಕರಡಿ ಸಂಗಣ್ಣ ಹರ್ಷ
ಒಣಬೇಸಾಯ ಸಂಶೋಧನಾ ಕೇಂದ್ರ ಮಂಜೂರು- ಸಂಸದ ಕರಡಿ ಸಂಗಣ್ಣ ಹರ್ಷ
ಕೊಪ್ಪಳ ಏ. 28 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕು ಗುಳದಳ್ಳಿ ಗ್ರಾಮದಲ್ಲಿ ನೂತನವಾಗಿ ಒಣ ಬೇಸಾಯ ಸಂಶೋಧನಾ ಕೇಂದ್ರವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದ್ದು, ಇದಕ್ಕಾಗಿ ರಾಜ್ಯ ಸರ್ಕಾರದಿಂದ ಜಮೀನು ಒದಗಿಸಿದ್ದಕ್ಕಾಗಿ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕೊಪ್ಪಳ ಜಿಲ್ಲೆಗೆ ಒಣ ಬೇಸಾಯ ಸಂಶೋಧನಾ ಕೇಂದ್ರವನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಇದನ್ನು ಮಂಜೂರು ಮಾಡಿದೆ. ರಾಜ್ಯ ಸರ್ಕಾರವೂ ಕೂಡ ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದು, ಒಣ ಬೇಸಾಯ ಸಂಶೋಧನಾ ಕೇಂದ್ರ ಸ್ಥಾಪನೆಗೆ ಗುಳದಳ್ಳಿಯಲ್ಲಿ ಜಮೀನು ಮಂಜೂರು ಮಾಡಿದೆ. ಈ ಭಾಗದಲ್ಲಿ ಮುಂಗಾರು ಹಂಗಾಮಿನ ಕೆಂಪು ಮಣ್ಣಿನ ಕೃಷಿಕರಿಗೆ, ಮಣ್ಣಿಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಲು ಮತ್ತು ರಸಗೊಬ್ಬರ ಬಳಕೆ ಕುರಿತಂತೆ ನೂತನ ಸಂಶೋಧನಾ ಕೇಂದ್ರದಿಂದ ಕೃಷಿಕರಿಗೆ ಉತ್ತಮ ಮಾರ್ಗದರ್ಶನ ದೊರೆಯಲು ಸಹಕಾರಿಯಾಗಲಿದೆ ಎಂದು ಸಂಸದ ಕರಡಿ ಸಂಗಣ್ಣ ಅವರು ತಿಳಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಒಣಬೇಸಾಯ ಸಂಶೋಧನಾ ಕೇಂದ್ರ ಮಂಜೂರು- ಸಂಸದ ಕರಡಿ ಸಂಗಣ್ಣ ಹರ್ಷ
ಎಲ್ಲಾ ಲೇಖನಗಳು ಆಗಿದೆ ಒಣಬೇಸಾಯ ಸಂಶೋಧನಾ ಕೇಂದ್ರ ಮಂಜೂರು- ಸಂಸದ ಕರಡಿ ಸಂಗಣ್ಣ ಹರ್ಷ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಒಣಬೇಸಾಯ ಸಂಶೋಧನಾ ಕೇಂದ್ರ ಮಂಜೂರು- ಸಂಸದ ಕರಡಿ ಸಂಗಣ್ಣ ಹರ್ಷ ಲಿಂಕ್ ವಿಳಾಸ https://dekalungi.blogspot.com/2017/04/blog-post_889.html
0 Response to "ಒಣಬೇಸಾಯ ಸಂಶೋಧನಾ ಕೇಂದ್ರ ಮಂಜೂರು- ಸಂಸದ ಕರಡಿ ಸಂಗಣ್ಣ ಹರ್ಷ"
ಕಾಮೆಂಟ್ ಪೋಸ್ಟ್ ಮಾಡಿ