ಮೊಗೇರರಲ್ಲಿ ಮತಾಂತರ: ನೈಜ ಸಮಸ್ಯೆಯೇ ಅಥವಾ ಕಾಲ್ಪನಿಕವೇ?

ಮೊಗೇರರಲ್ಲಿ ಮತಾಂತರ: ನೈಜ ಸಮಸ್ಯೆಯೇ ಅಥವಾ ಕಾಲ್ಪನಿಕವೇ? - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಮೊಗೇರರಲ್ಲಿ ಮತಾಂತರ: ನೈಜ ಸಮಸ್ಯೆಯೇ ಅಥವಾ ಕಾಲ್ಪನಿಕವೇ?, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಮೊಗೇರರಲ್ಲಿ ಮತಾಂತರ: ನೈಜ ಸಮಸ್ಯೆಯೇ ಅಥವಾ ಕಾಲ್ಪನಿಕವೇ?
ಲಿಂಕ್ : ಮೊಗೇರರಲ್ಲಿ ಮತಾಂತರ: ನೈಜ ಸಮಸ್ಯೆಯೇ ಅಥವಾ ಕಾಲ್ಪನಿಕವೇ?

ಓದಿ


ಮೊಗೇರರಲ್ಲಿ ಮತಾಂತರ: ನೈಜ ಸಮಸ್ಯೆಯೇ ಅಥವಾ ಕಾಲ್ಪನಿಕವೇ?

MOGERAWORLD TEAM BY:-PRAKASH MARPADY
"ಎರಡು ಅಂಶಗಳನ್ನು ಪ್ರಾರಂಭದಲ್ಲೇ ಶ್ರುತಪಡಿಸುತ್ತೇನೆ. ಒಂದನೆಯದ್ದು, ಇದು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಕಾರ್ಯಸೂಚಿ ಅಥವಾ ಚಟುವಟಿಕೆಯನ್ನು ಟೀಕಿಸುವ ಬರಹವಲ್ಲ. ಎರಡನೆಯದ್ದು, ಇದು ಸಂಪೂರ್ಣ ಅಥವಾ ಪ್ರಬುದ್ಧ ಬರಹವಲ್ಲ, ಲೇಖನದ ಬಗೆಗಿನ ಟೀಕೆ-ಚರ್ಚೆಗೆ ಸ್ವಾಗತ;"

ಭಾರತದಲ್ಲಿ ಧಾರ್ಮಿಕ ಮತಾಂತರದ ಚರ್ಚೆಗೆ ದೀರ್ಘವಾದ ಇತಿಹಾಸವಿದೆ. “ಹಿಂದೂ ರಾಷ್ಟ್ರ” ಹಾಗೂ “ಹಿಂದೂ ರಾಷ್ಟ್ರೀಯವಾದ”ದ ನಿರೂಪಣೆಯ ಸಂದರ್ಭದಲ್ಲಿ ಹಾಗೂ ಧಾರ್ಮಿಕ ರಾಜಕಾರಣ ಟೀಸಿಲೊಡೆದ ಕಾಲಕ್ಕೆ ಧಾರ್ಮಿಕ ಮತಾಂತರದ ಬಗ್ಗೆ ದೀರ್ಘವಾದ ಚರ್ಚೆಗಳು ನಡೆದಿದ್ದವು. ಆದರೆ ಈ ಎಲ್ಲಾ  ಚರ್ಚೆಗಳಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮವನ್ನು ಕೇಂದ್ರ ಸ್ಥಾನದಲ್ಲಿರಿಸಿ ಚರ್ಚೆ ನಡೆಸಿತ್ತು. ಈ ಚರ್ಚೆಗಳು ಎರಡು ರೀತಿಯಾ ವಿಶ್ಲೇಷಣಾ ಮಾದರಿಯನ್ನು ಬಳಸಿ ತಮ್ಮ ವಾದವನ್ನು ಮಂಡಿಸಿದ್ದವು. ಒಂದು ಊಹಾತ್ಮಕ ಮಾದರಿಯಡಿಯಲ್ಲಿ ಮಧ್ಯಕಾಲೀನ ಮುಸ್ಲಿಂ ರಾಜ್ಯಾಡಳಿತದಲ್ಲಿ ನಡೆದಿರಬಹುದಾದ(ಸ್ಪಷ್ಟ ದಾಖಲೆಗಳಿಲ್ಲ) ಒತ್ತಾಯದ ಮತಾಂತರ, ಇನ್ನೊಂದು ದುರ್ಬಲರೆಂಬ ಕಾರಣಕ್ಕೆ ದಲಿತ ಹಾಗೂ ಬುಡಕಟ್ಟು ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದ ಮಿಷನರಿಗಳ ಧಾರ್ಮಿಕ ಕಾರ್ಯ.
ಈ ಎರಡು ವಾದಗಳು ಮತಾಂತರವನ್ನು ರಾಷ್ಟ್ರೀಯ ಸಮಸ್ಯೆಯನ್ನಾಗಿ ಬಿಂಬಿಸಿ, ರಾಜಕೀಯ ಕಾರ್ಯಸೂಚಿಯನ್ನಾಗಿಸುವ ಇರಾದೆಯಿತ್ತೆಂಬುದನ್ನು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು ಹಾಗೂ ಅದು ನಿಜವೇ ಆಯಿತು. ತದನಂತರ ಘರ್ವಾಪಸಿಯಂತಹ ಪುನರ್ಶುದ್ಧಿ ಕಾರ್ಯಕ್ರಮಗಳನ್ನು ನಡೆಸಿ ಮತಾಂತರಗೊಂಡವರನ್ನು ಪುನರಪಿ ಮೂಲಧರ್ಮಕ್ಕೆ ಕರೆತರುವ ಯೋಜನೆಗಳು ನಡೆದವು, ಆ ಯೋಜನೆಯ ಪ್ರಥಮ ಕಾರ್ಯಕ್ರಮ ನಾಲ್ಕು ದಶಕಗಳ ಹಿಂದೆ ಉಡುಪಿಯಲ್ಲೇ ನಡೆಯಿತು. ಇಷ್ಟು ಹಿನ್ನೆಲೆಯನ್ನು ನೀಡಲು ಕಾರಣವಿಷ್ಟೇ, ಭಾರತದಲ್ಲಿ ಮತಾಂತರದ ಬಗೆಗಿನ ಚರ್ಚೆಗಳು ಹುಟ್ಟುವುದಕ್ಕೆ ರಾಜಕೀಯ ಕಾರಣಗಳಿತ್ತೇ ಹೊರತು ಸಾಮಾಜಿಕ ಕಾರಣಗಳಿರಲಿಲ್ಲ. ಇನ್ನು ದಕ್ಷಿಣ ಕನ್ನಡದಲ್ಲಿ ಬಾಸೆಲ್ ಮಿಷನರಿಗಳು ತಮ್ಮ ಧರ್ಮ ಭೋಧನೆಗಳ ಮೂಲಕ ಮತಾಂತರಗೊಳಿಸಿರುವ ಬಗ್ಗೆ ದಾಖಲೆಗಳಿವೆ. ಪ್ರಮುಖವಾಗಿ ಕೆಳಹಿಂದುಳಿದ ಜಾತಿಯಾದ ಬಿಲ್ಲವರು ಹಾಗೂ ಉನ್ನತ ಸ್ಥಾನಮಾನ ಹೊಂದಿದ ಬಂಟರು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದವರು. ಮುಂದುವರಿದು, ಕೊರಗ ಸಮುದಾಯದವರು ಹಾಗೂ ಮನ್ಸ ಸಮುದಾಯದವರೂ ತಮ್ಮ ಮೂಲ ಧರ್ಮವನ್ನು ತೊರೆದು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದಾರೆ, ಆದರೆ ಮೊಗೇರ ಸಮುದಾಯದವರು ಮತಾಂತರ ಹೊಂದಿದ್ದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಇದಕ್ಕೆ ಮುಖ್ಯ ಕಾರಣ ಮೊಗೇರ ಸಮುದಾಯದ ಬಿಗಿ ಕಟ್ಟುಪಾಡುಗಳು ಹಾಗೂ ಸಂಕೀರ್ಣ ಆಚರಣಾ ಪದ್ಧತಿಗಳು ಸಾಂಸ್ಥಿಕವೆನಿಸಿದ ಇಂದಿನ ಧರ್ಮಗಳನ್ನು ಮೀರಿಸಿದ್ದವು.
ವಿಶೇಷವಾಗಿ ಗಮನಿಸಬೇಕಾಗಿದ್ದು, ಬಾಸೆಲ್ ಮಿಷನರಿಯವರ 1860-70 ರ “ತುಳು ಚಳುವಳಿ”. ಈ ಚಳುವಳಿಯಡಿ ತಮ್ಮ ಮತಾಂತರದ ಕಾರ್ಯವನ್ನು ಕೇಂದ್ರಸ್ಥಾನವಾದ ಮಂಗಳೂರಿನಿಂದ ಮುಲ್ಕಿ, ಕಾರ್ಕಳ, ಉಡುಪಿ ಹಾಗೂ ಜಿಲ್ಲೆಯ ಇತರೇ ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಿದರೂ, ಯಾವನೇ ಒಬ್ಬ ಮೊಗೇರ ಸಾಮಾಜಿಕ ಅಥವಾ ಆರ್ಥಿಕ ಕಾರಣಕ್ಕಾಗಿ ಮತಾಂತರಗೊಂಡಿಲ್ಲ. ಗಮನಿಸಬೇಕು; ಆ ದಿನಗಳು ನಮ್ಮವರ ಪಾಲಿಗೆ ಅತೀ ಕಷ್ಟದ ದಿನಗಳು.
ಅತೀ ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಬಿಲ್ಲವರು ಹಾಗೂ ಬಂಟರು ಕ್ರೈಸ್ತ ಧರ್ಮಕ್ಕೆ ಮತಾಂತರವಾದರೂ ಅವರ ಮನೆಯಾಳಗಿದ್ದ ಮೊಗೇರರು ಯಾವುದೇ ಕಾರಣಕ್ಕೂ ಮತಾಂತರವಾಗಿಲ್ಲವೆಂಬುದು ನಮ್ಮ ಸಮುದಾಯ ಸಂರಚನೆಯ ಹೆಗ್ಗಳಿಕೆಯೇ ಸರಿ. ಈಗ, ಮೂಲಪ್ರಶ್ನೆಗೆ ಬರೋಣ, ಐತಿಹಾಸಿಕವಾಗಿ ಎಲ್ಲೂ ಮತಾಂತರಗೊಳ್ಳದ ಮೊಗೇರರು, ಇಂದು ಮತಾಂತರವಾಗುತ್ತಿದ್ದಾರೆಯೇ? ಅಥವಾ ಇದೊಂದು ಕಾಲ್ಪನಿಕ ಕಥೆಯೇ? ಅಥವಾ ಎರಡು ಭಿನ್ನ ಆಸಕ್ತಿಯುಳ್ಳವರು ಪರಸ್ಪರ ಕಿತ್ತಾಡುವ ಸಲುವಾಗಿ ಸೃಷ್ಟಿಸಿದ ’ಗುಮ್ಮ’ ವೇ?. ಯಾಕೆಂದರೆ ಮುಖ್ಯವಾಹಿನಿಯಲ್ಲಿರುವ ಮತಾಂತರದ ಸಿದ್ದಾಂತ ಹಾಗೂ ಅದರ ಕಾರಣಗಳು ಮೊಗೇರರ ಮತಾಂತರದ ಕಾರಣವಾಗುವುದಕ್ಕೆ ಸಾಧ್ಯವೇ ಇಲ್ಲ. ಆಗಿದ್ದರೆ, ಮೊಗೇರರಲ್ಲಿ ಮತಾಂತರವಿದೆ ಹಾಗೂ ಅದೊಂದು ಮೊಗೇರರ ಸಾಮುದಾಯಿಕ ಸಮಸ್ಯೆಯೆನ್ನುವವರು ನೀಡುವ ಕಾರಣಗಳ್ಯಾವುವು?. ಈ ಪ್ರಶ್ನೆಯನ್ನು ತೀರಾ ಗಂಭೀರವಾಗಿ ಅವಲೋಕಿಸಬೇಕಾಗುತ್ತದೆ. ಒಂದು ಸಮುದಾಯದಕ್ಕೆ ಮತಾಂತರದಂತಹ ಸೂಕ್ಷ್ಮ ಸಮಸ್ಯೆಯನ್ನು ತಗಲಿಸಿಬಿಡುವುದು ಅತೀ ಸುಲಭ, ಆದರೆ ಅದರಿಂದ ಕಳಚಿಕೊಳ್ಳುವುದು ಈಗಾಷ್ಟೇ ಅಧುನಿಕತೆಯೆಡೆಗೆ ಮುಖಮಾಡಿರುವ ನಮ್ಮಂತಹ ಎಳೆ ಸಮುದಾಯಕ್ಕೆ ಕಷ್ಟ ಸಾಧ್ಯ, ದೀರ್ಘ ಕಾರ್ಯವೂ ಹೌದು. ಉದಾಹರಣೆಗೆ ಕೊರಗ ಸಮುದಾಯವನ್ನು ಗಮನಿಸಿ. ನನಗಿಸುವುದು ಮತಾಂತರದಂತಹ ಚರ್ಚೆಯನ್ನು ನಮ್ಮ ಮುಖ್ಯವಾಹಿನಿಗೆ ತರುವುದರಿಂದ ಸಾರ್ವಜನಿಕವಾಗಿ ನಾವೇ ಇದೊಂದು ನಮ್ಮ ಸಮುದಾಯದ ಸಾರ್ವತ್ರಿಕ ಸಮಸ್ಯೆಯೆಂದು ಘೋಷಿಸಿಕೊಂಡತಾಗುತ್ತದೆ. ಒಂದಂತೂ ಕಟು ಸತ್ಯ, ಶಿಕ್ಷಣ, ಉದ್ಯೋಗ,ಶೋಷಣೆ, ಸ್ವಾವಲಂಬನೆ ಮುಂತಾದ ಜ್ವಲಂತ ಸಮಸ್ಯೆಗಳ ಮುಂದೆ ಮತಾಂತರದಂತಹ ಕಾಲ್ಪನಿಕ ಸಮಸ್ಯೆ ಏನೇನೂ ಅಲ್ಲ.
ಇನ್ನೊಂದು ಮಾತು ಹೇಳಲೆಬೇಕು. ಅಂಬೇಡ್ಕರರಿಂದ ಪ್ರೇರಿತರಾಗಿ ಭೌದ್ಧ ಧರ್ಮದ ಬಗ್ಗೆ ಒಲವುಳ್ಳ ಮೊಗೇರರಿದ್ದಾರೆ. ಇವರು ಸಾಮಾನ್ಯ ಮೊಗೇರರಲ್ಲ, ಬದಲಾಗಿ ವಿದ್ಯಾವಂತ, ಉದ್ಯೋಗಸ್ಥರು, ಇವರ ಸಂಖ್ಯೆ ಅತೀ ಕಡಿಮೆಯಾದುದರಿಂದ ಅವರಿಂದ ನಮ್ಮ ಸಮುದಾಯಕ್ಕೆ ದೊಡ್ಡ ಹೊಡೆತವೇನು ಆಗಲಾರದು. ಅಲ್ಲದೇ, ಭೌಧ್ಧ, ಹಿಂದೂ ಹಾಗೂ ಇತರೆ ಧರ್ಮಗಳ ಉದಾತ್ತ ಮೌಲ್ಯಗಳನ್ನು ತಾತ್ವಿಕವಾಗಿ ಒಪ್ಪಿಕೊಳ್ಳುವುದು ಅಪರಾಧವೇನೂ ಅಲ್ಲ. ನಾವೆಲ್ಲ ಅಂತಹ ಒಪ್ಪುವಿಕೆಯನ್ನು ತಿಳಿದೋ-ತಿಳಿಯದೆಯೋ ಪಾಲಿಸುವವರು. ಆದುದರಿಂದ ಮತಾಂತರವೆಂಬುದು ನಮ್ಮ ಮೊಗೇರ ಸಮುದಾಯಕ್ಕೆ ಹೇಳಿಕೊಳ್ಳುವಂತಹ ಸಮಸ್ಯೆಯಲ್ಲ, ಇದು ಕೇವಲ ಭಿನ್ನ ಆಸಕ್ತಿಯ ಸಂಘರ್ಷದ ಕಾರಣದಿಂದ ರೂಪಿಸಲ್ಪಟ್ಟ ಕಾಲ್ಪನಿಕ ಸಮಸ್ಯೆಯಷ್ಟೆ. ಅಧುನಿಕತೆಯ ಸಣ್ಣ ಫಲಾನುಭವಿಗಳಾದ ನಾವುಗಳು ಇಂತಹ ಕಾಲ್ಪನಿಕ ಸಮಸ್ಯೆಗಳ ಬಗ್ಗೆ ಚರ್ಚಿಸದೆ, ನಮ್ಮ ಸಮುದಾಯದ ನೈಜ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸೋಣ.
MOGERAWORLD TEAM BY:-PRAKASH MARPADY


ಹೀಗಾಗಿ ಲೇಖನಗಳು ಮೊಗೇರರಲ್ಲಿ ಮತಾಂತರ: ನೈಜ ಸಮಸ್ಯೆಯೇ ಅಥವಾ ಕಾಲ್ಪನಿಕವೇ?

ಎಲ್ಲಾ ಲೇಖನಗಳು ಆಗಿದೆ ಮೊಗೇರರಲ್ಲಿ ಮತಾಂತರ: ನೈಜ ಸಮಸ್ಯೆಯೇ ಅಥವಾ ಕಾಲ್ಪನಿಕವೇ? ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಮೊಗೇರರಲ್ಲಿ ಮತಾಂತರ: ನೈಜ ಸಮಸ್ಯೆಯೇ ಅಥವಾ ಕಾಲ್ಪನಿಕವೇ? ಲಿಂಕ್ ವಿಳಾಸ https://dekalungi.blogspot.com/2017/04/blog-post_523.html

Subscribe to receive free email updates:

0 Response to "ಮೊಗೇರರಲ್ಲಿ ಮತಾಂತರ: ನೈಜ ಸಮಸ್ಯೆಯೇ ಅಥವಾ ಕಾಲ್ಪನಿಕವೇ?"

ಕಾಮೆಂಟ್‌‌ ಪೋಸ್ಟ್‌ ಮಾಡಿ