ವಿಧಾನಸಭಾ ಚುನಾವಣೆ : ಕ್ಷೇತ್ರಗಳತ್ತ ಹೊರಟ ಮತ ಯಂತ್ರಗಳು

ವಿಧಾನಸಭಾ ಚುನಾವಣೆ : ಕ್ಷೇತ್ರಗಳತ್ತ ಹೊರಟ ಮತ ಯಂತ್ರಗಳು - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ವಿಧಾನಸಭಾ ಚುನಾವಣೆ : ಕ್ಷೇತ್ರಗಳತ್ತ ಹೊರಟ ಮತ ಯಂತ್ರಗಳು, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ವಿಧಾನಸಭಾ ಚುನಾವಣೆ : ಕ್ಷೇತ್ರಗಳತ್ತ ಹೊರಟ ಮತ ಯಂತ್ರಗಳು
ಲಿಂಕ್ : ವಿಧಾನಸಭಾ ಚುನಾವಣೆ : ಕ್ಷೇತ್ರಗಳತ್ತ ಹೊರಟ ಮತ ಯಂತ್ರಗಳು

ಓದಿ


ವಿಧಾನಸಭಾ ಚುನಾವಣೆ : ಕ್ಷೇತ್ರಗಳತ್ತ ಹೊರಟ ಮತ ಯಂತ್ರಗಳು

ಕೊಪ್ಪಳ ಏ. 18 (ಕರ್ನಾಟಕ ವಾರ್ತೆ): ಪ್ರಸಕ್ತ ವಿಧಾನಸಭಾ ಚುನಾವಣೆ ಪ್ರಕ್ರಿಯೆಗಳು ಚುರುಕುಗೊಂಡಿದ್ದು, ಮೇ. 12 ರಂದು ನಡೆಯುವ ಮತದಾನ ಕಾರ್ಯಕ್ಕಾಗಿ ಬಳಸಲಾಗುವ ಮತಯಂತ್ರಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ವಾಹನಗಳ ಮೂಲಕ ಕೊಪ್ಪಳ ಜಿಲ್ಲೆಯ ಆಯಾ ತಾಲೂಕು ಕೇಂದ್ರಗಳಿಗೆ ಬುಧವಾರದಂದು ಸಾಗಿಸಲಾಯಿತು.

     ಕೊಪ್ಪಳ ಜಿಲ್ಲಾಡಳಿತ ಭವನ ಆವರಣದಲ್ಲಿನ ಮತಯಂತ್ರಗಳ ದಾಸ್ತಾನು ಕೇಂದ್ರದಲ್ಲಿ ಇದುವರೆಗೂ ಪೊಲೀಸರ ಸರ್ಪಗಾವಲಿನಲ್ಲಿ ಇರಿಸಲಾಗಿದ್ದ ವಿದ್ಯುನ್ಮಾನ ಮತಯಂತ್ರಗಳನ್ನು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮಂಗಳವಾರದಂದು ಕಂಪ್ಯೂಟರೀಕೃತ ರ್‍ಯಾಂಡಮೈಜೇಶನ್ ಮೂಲಕ ಆಯಾ ಕ್ಷೇತ್ರಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳು ಹಂಚಿಕೆ ಮಾಡಿದ್ದರು.

     ಮಂಗಳವಾರದಂದು ಬೆಳಿಗ್ಗೆ 06 ಗಂಟೆಯಿಂದಲೇ ಭೌತಿಕವಾಗಿ ಮತ ಯಂತ್ರಗಳ ಹಂಚಿಕೆ ಕಾರ್ಯ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಾರಂಭಗೊಂಡಿತು.  ಆಯಾ ಕ್ಷೇತ್ರ ಚುನಾವಣಾಧಿಕಾರಿಗಳು ಮತಯಂತ್ರಗಳನ್ನು ವಾಹನಗಳಲ್ಲಿ ಕೊಂಡೊಯ್ಯಲು ಬೆಳಿಗ್ಗೆಯೇ ಸಜ್ಜಾಗಿ ಬಂದಿದ್ದರು.  ಮತಯಂತ್ರಗಳ ಸಾಗಾಟ ಪ್ರಕ್ರಿಯೆಯಲ್ಲಿ ಬಂದೋಬಸ್ತ್ ಕೈಗೊಳ್ಳಲು ಪೊಲೀಸರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾಡಳಿತ ಭವನ ಆವರಣದಲ್ಲಿ ಜಮಾವಣೆಗೊಂಡಿದ್ದರು.  ಕ್ಷೇತ್ರಗಳಿಗೆ ಹಂಚಿಕೆಯಾದ ಮತಯಂತ್ರ ಪೆಟ್ಟಿಗೆಗಳ ಸಂಖ್ಯೆಯ ವಿವರ ಹೊಂದಿರುವ ಪಟ್ಟಿಯನ್ನು ಹಿಡಿದು, ಚುನಾವಣಾ ಸಿಬ್ಬಂದಿಗಳು ಮತಯಂತ್ರ ಪೆಟ್ಟಿಗೆಗಳನ್ನು ಹಂಚಿಕೆ ಮಾಡಿದರು.  ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಬೆಳಿಗ್ಗೆ 06 ಗಂಟೆಯಿಂದಲೇ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ, ಮತಯಂತ್ರಗಳ ಹಂಚಿಕೆ ಹಾಗೂ ಸಾಗಾಣಿಕೆ ಪ್ರಕ್ರಿಯೆಯನ್ನು ಖುದ್ದಾಗಿ ಸ್ಥಳದಲ್ಲಿಯೇ ಇದ್ದು ಪರಿಶೀಲನೆ ನಡೆಸಿದರು.  ಆಯಾ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾದ ಮತಯಂತ್ರಗಳ ಪೆಟ್ಟಿಗೆಗಳನ್ನು ವಾಹನಕ್ಕೆ ತುಂಬಿ, ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಸಾಗಿಸಲಾಯಿತು.  ಚುನಾವಣೆಗಾಗಿ ನಿಯೋಜನೆಗೊಂಡಿರುವ ಸಿಬ್ಬಂದಿಗಳು ಪಾಲ್ಗೊಂಡು, ಮತಯಂತ್ರಗಳ ಸಾಗಾಣಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.


ಹೀಗಾಗಿ ಲೇಖನಗಳು ವಿಧಾನಸಭಾ ಚುನಾವಣೆ : ಕ್ಷೇತ್ರಗಳತ್ತ ಹೊರಟ ಮತ ಯಂತ್ರಗಳು

ಎಲ್ಲಾ ಲೇಖನಗಳು ಆಗಿದೆ ವಿಧಾನಸಭಾ ಚುನಾವಣೆ : ಕ್ಷೇತ್ರಗಳತ್ತ ಹೊರಟ ಮತ ಯಂತ್ರಗಳು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಧಾನಸಭಾ ಚುನಾವಣೆ : ಕ್ಷೇತ್ರಗಳತ್ತ ಹೊರಟ ಮತ ಯಂತ್ರಗಳು ಲಿಂಕ್ ವಿಳಾಸ https://dekalungi.blogspot.com/2018/04/blog-post_78.html

Subscribe to receive free email updates:

0 Response to "ವಿಧಾನಸಭಾ ಚುನಾವಣೆ : ಕ್ಷೇತ್ರಗಳತ್ತ ಹೊರಟ ಮತ ಯಂತ್ರಗಳು"

ಕಾಮೆಂಟ್‌‌ ಪೋಸ್ಟ್‌ ಮಾಡಿ