ಶೀರ್ಷಿಕೆ : ಸೆ. 25 ರಿಂದ ಕೊಪ್ಪಳದಲ್ಲಿ ಮಧು ಮೇಳ
ಲಿಂಕ್ : ಸೆ. 25 ರಿಂದ ಕೊಪ್ಪಳದಲ್ಲಿ ಮಧು ಮೇಳ
ಸೆ. 25 ರಿಂದ ಕೊಪ್ಪಳದಲ್ಲಿ ಮಧು ಮೇಳ
ಕೊಪ್ಪಳ ಸೆ. 18 (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆಯು ಮಧು ಮೇಳವನ್ನು ಸೆ. 25 ರಿಂದ 27 ರವರೆಗೆ ಮೂರು ದಿನಗಳ ಕಾಲ ಕೊಪ್ಪಳದ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದೆ.
ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ಉತ್ಪನ್ನವನ್ನು ಪರಾಗ ಸ್ಪರ್ಶದ ಮೂಲಕ ಹೆಚ್ಚಿಸುವ ಸಲುವಾಗಿ ಮತ್ತು ಜೇನು ಕೃಷಿ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಲು, ಜೇನಿನ ಔಷಧಿ ಗುಣಗಳ ಕುರಿತು, ವಿವಿಧ ಜೇನಿನ ತಳಿಗಳು ಮತ್ತು ಉತ್ಪನ್ನಗಳ ಉಪ ಕಸುಬಿನ ಬಗ್ಗೆ ಪರಿಚಯಿಸುವುದು, ಕಲಬೆರಿಕೆ ಜೇನಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ಗುಣಮಟ್ಟದ ಜೇನನ್ನು ಜಿಲ್ಲೆಯ ಸಾರ್ವಜನಿಕರಿಗೆ ಒದಗಿಸುವ ಉದ್ದೇಶದಿಂದ ಕೊಪ್ಪಳದ ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಕಛೇರಿ ಆವರಣದಲ್ಲಿ ಸೆ. 25 ರಿಂದ 27 ವರೆಗೆ 3ದಿನಗಳ "ಜೇನು ಪ್ರದರ್ಶನ ಮತ್ತು ಮಾರಾಟ ಮೇಳ"(ಮಧು ಮೇಳ) ಆಯೋಜಿಸಲಾಗಿದೆ.
ಜಿಲ್ಲೆಯ ರೈತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ "ಜೇನು ಮೇಳ" (ಮಧು ಮೇಳ) ದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಮಧು ಮೇಳ ಕುರಿತ ಹೆಚ್ಚಿನ ಮಾಹಿತಿಗಾಗಿ ಶಿವಯೋಗಿ, ಸಹಾಯಕ ತೋಟಗಾರಿಕೆ ನಿರ್ದೇಶಕರು, ಕೊಪ್ಪಳ- 9743518608/ 08539 231530 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಸೆ. 25 ರಿಂದ ಕೊಪ್ಪಳದಲ್ಲಿ ಮಧು ಮೇಳ
ಎಲ್ಲಾ ಲೇಖನಗಳು ಆಗಿದೆ ಸೆ. 25 ರಿಂದ ಕೊಪ್ಪಳದಲ್ಲಿ ಮಧು ಮೇಳ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸೆ. 25 ರಿಂದ ಕೊಪ್ಪಳದಲ್ಲಿ ಮಧು ಮೇಳ ಲಿಂಕ್ ವಿಳಾಸ https://dekalungi.blogspot.com/2017/09/25.html
0 Response to "ಸೆ. 25 ರಿಂದ ಕೊಪ್ಪಳದಲ್ಲಿ ಮಧು ಮೇಳ"
ಕಾಮೆಂಟ್ ಪೋಸ್ಟ್ ಮಾಡಿ