ತಹ ತಹ.....97 ಅಹಾರದ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯ : ಮೈಸೂರಲ್ಲೊಂದು ಅನಗತ್ಯ ವಿವಾದ

ತಹ ತಹ.....97 ಅಹಾರದ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯ : ಮೈಸೂರಲ್ಲೊಂದು ಅನಗತ್ಯ ವಿವಾದ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ತಹ ತಹ.....97 ಅಹಾರದ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯ : ಮೈಸೂರಲ್ಲೊಂದು ಅನಗತ್ಯ ವಿವಾದ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ತಹ ತಹ.....97 ಅಹಾರದ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯ : ಮೈಸೂರಲ್ಲೊಂದು ಅನಗತ್ಯ ವಿವಾದ
ಲಿಂಕ್ : ತಹ ತಹ.....97 ಅಹಾರದ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯ : ಮೈಸೂರಲ್ಲೊಂದು ಅನಗತ್ಯ ವಿವಾದ

ಓದಿ


ತಹ ತಹ.....97 ಅಹಾರದ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯ : ಮೈಸೂರಲ್ಲೊಂದು ಅನಗತ್ಯ ವಿವಾದ


ಗೋಮಾಂಸ ಸೇವನೆಯ ಪ್ರಮಾದಕ್ಕೆ  ಗೋಮೂತ್ರದ ಪರಿಹಾರ...!!!



ಮೈಸೂರಿನ ಕಲಾಮಂದಿರದಲ್ಲಿರುವ ಮನೆಯಂಗಳ ಸಭಾಂಗಣದಲ್ಲಿ ಚಾರ್ವಾಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಮೂರು ದಿನಗಳ ವಿಚಾರ ಸಂಕಿರಣವೊಂದು ಆಯೋಜನೆಗೊಂಡಿತ್ತು. ಜೂನ್ ಶನಿವಾರ ಭಾನುವಾರ ಹಾಗೂ ರಂಜಾನ್ ಹಬ್ಬದ ದಿನ ಸೋಮವಾರಗಳಂದು ಸರಕಾರಿ ರಜೆಗಳಿರುವುದರಿಂದ ಹೆಚ್ಚು ಜನ ಕಾರ್ಯಕ್ರಮಕ್ಕೆ ಬರುತ್ತಾರೆಂಬ ಯೋಚನೆ ಸಂಘಟಕರದ್ದಾಗಿತ್ತು. ಆಹಾರದ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯದ ಕುರಿತಾದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದ ಉದ್ಘಾಟನೆಯ ಸಮಯದಲ್ಲಿ ಗೋಮಾಂಸವನ್ನು ಕೆಲವಾರು ಪ್ರಗತಿಪರರು ಸೇವಿಸಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಗೋವಿನ ಮಾರಾಟ ಹಾಗೂ ಹತ್ಯೆಯನ್ನು ನಿರ್ಬಂಧಿಸುವ ಕೇಂದ್ರ ಸರಕಾರ ಹಾಗೂ ಸಂಘಪರಿವಾರದ ಜೀವವಿರೋಧಿ ನೀತಿಯನ್ನು ವಿರೋಧಿಸವ ನಿಟ್ಟಿನಲ್ಲಿ ಗೋಮಾಂಸ ಭಕ್ಷಣೆಯು ವಿಚಾರ ಸಂಕಿರಣದ ಭಾಗವಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿದ್ದ ಪ್ರೊ.ಕೆ.ಎಸ್.ಭಗವಾನ್‌ರವರೂ ಸಹ ಎಲ್ಲರ ಜೊತೆಗೆ ಗೋಮಾಂಸವನ್ನು ಸೇವಿಸಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದರು. ಇಷ್ಟು ಸಾಕಾಗಿತ್ತು ಮತಾಂಧ ಪಡೆಗೆ ಟಿವಿ ಮಾಧ್ಯಮಗಳಲ್ಲಿ, ಜಾಲತಾಣಗಳಲ್ಲಿ ಹುಯಿಲೆಬ್ಬಿಸಲು. ಮತಿಗೆಟ್ಟ ಬಿಜೆಪಿಯ ಯುವ ಮೋರ್ಚಾದವರು ಅಲ್ಲಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಂಡು ಬಾಯಿಬಡಿದುಕೊಳ್ಳಲು. ಅಲ್ಲಿ ಗೋಮಾಂಸ ಸೇವಿಸಿದವರೆಲ್ಲರನ್ನೂ ಬಿಟ್ಟರು ಭಗವಾನ್‌ರವರಿಗೆ ಅಟಕಾಯಿಸಿಕೊಂಡರು. ಈ ಸಂಕಿರಣದಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಕೆ.ಎಸ್.ಶಿವರಾಂ, ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಮೈಸೂರು ವಿವಿ ಪ್ರಾದ್ಯಾಪಕ ಮಹೇಶ ಚಂದ್ರ ಗುರು ಹಾಗೂ ಇನ್ನೂ ಅನೇಕ ಪ್ರಜ್ಞಾವಂತ ವಿಚಾರವಾದಿಗಳು ಭಾಗವಹಿಸಿದ್ದರು. 

ಸಾರ್ವಜನಿಕವಾಗಿ ಗೋಮಾಂಸ ತಿಂದಿದ್ದು ಅಪರಾಧ. ಅದೂ ಸರಕಾರಿ ಕಟ್ಟಡದಲ್ಲಿ ತಿಂದಿದ್ದಂತೂ ಘನಘೋರ ಅಪರಾಧ, ಅದರಲ್ಲೂ ಭಗವಾನ್‌ರಂತವರು ತಿಂದಿದ್ದಂತೂ ಅರಗಿಸಿಕೊಳ್ಳಲಾಗದ ಅಕ್ಷಮ್ಯ ಅಪರಾಧ ಎನ್ನುವುದು ಈ ಸೋಕಾಲ್ಡ್ ಹಿಂದುತ್ವವಾದಿಗಳ ಆತಂಕ ಹಾಗೂ ಆರೋಪವಾಗಿತ್ತು. ಹುಸಿ ಭ್ರಮೆಯನ್ನು ತಲೆಯಲ್ಲಿ ತುಂಬಿಕೊಂಡ ಈ ನಕಲಿ ಗೋಭಕ್ತರನ್ನು ಕೆರಳಿಸಲು ಈ ಘಟನೆ ಸಾಕಾಗಿತ್ತು. ವಿವಾದಗಳನ್ನು ಸೃಷ್ಟಿಸಿ ಜನರನ್ನು ದಿಕ್ಕೆಡೆಸಲು ಸದಾ ಹಸಿದು ಕಾಯ್ದುಕುಳಿತಿರುವ ಮತಾಂಧ ದುಷ್ಟ ಶಕ್ತಿಗಳಿಗೆ ಈ ಘಟನೆಯಿಂದಾಗಿ ಆಹಾರ ಸಿಕ್ಕಂತಾಯಿತು. ಆದರೆ.. ಅಲ್ಲಿ ನಡೆದದ್ದಾದರೂ ಏನು? ಗೋಮಾಂಸವನ್ನು ತಿಂದಿದ್ದಾದರೂ ಯಾಕೆ? ಎನ್ನುವುದನ್ನು ಅರಿತುಕೊಳ್ಳುವ ತಾಳ್ಮೆಯಾಗಲೀ ಇಲ್ಲವೇ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಭಿನ್ನಾಭಿಪ್ರಾಯಗಳಿದ್ದರೆ ಅಲ್ಲಿಯೇ ಮಂಡಿಸುವ ವೈಚಾರಿಕತೆಯಾಗಲೀ ಈ ಉನ್ಮಾದ ಪೀಡಿತರಿಗಂತೂ ಇಲ್ಲವೇ ಇಲ್ಲಾ.


ಇಷ್ಟಕ್ಕೂ ಗೋವು ಅಂದ ಕೂಡಲೇ ಸಂಘಿಗಳ ಅಂಗಗಳಲ್ಲಿ ಹಿಂದುತ್ವ ಜಾಗೃತವಾಗಿ ಬಿಡುತ್ತದೆ. ಮೂರು ಕೋಟಿ ದೇವತೆಗಳೂ ಇವರ ಮೈಮನಗಳಲ್ಲಿ ಏಕಕಾಲಕ್ಕೆ ಸೇರಿಕೊಂಡು ರುದ್ರತಾಂಡವ ಮಾಡತೊಡಗುತ್ತವೆ. ಎಂದೂ ಹಸುಗಳನ್ನು ಸಾಕದ, ಸಾಕಿ ಸಗಣಿ ಗಂಜಳ ಬಾಚದ ಈ ಗೋಭಕ್ತರಿಗೆ ಹಸುವಿನ ಬಗ್ಗೆ ಪವಿತ್ರ ಭಾವನೆ ಪ್ರಹರಿಸುತ್ತದೆ. ಆದರೆ.. ಹಸು ಕೂಡಾ ಎಲ್ಲಾ ಪ್ರಾಣಿಗಳ ಹಾಗೆಯೇ ಒಂದು ಪ್ರಾಣಿ ಎನ್ನುವುದನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲದ ಇವರು ಅದನ್ನು ಮಾತೆ, ದೇವತೆ ಎಂದೆಲ್ಲಾ ಪೂಜಿಸುತ್ತೇವೆ ಎನ್ನುತ್ತಾರೆ. ಆದರೆ ಇದೇ ಮಾತೆಯನ್ನು ಒಂದು ಕಡೆ ಕಟ್ಟಿ ಹಾಕಿ ಅದರ ಸಹಜ ಸ್ವಾತಂತ್ರ್ಯವನ್ನು ಹರಣ ಮಾಡಿದ್ದು ಇವರಿಗೆ ಸಹನೀಯ, ಅದೇ ದೇವತೆಯ ಕೆಚ್ಚಲಿಗೆ ಹಾಮೋನ್ ಇಂಜಕ್ಷನ್ ಕೊಟ್ಟು ಮಿತಿಮೀರಿದ ಹಾಲನ್ನು ಆಧುನಿಕ ಮಶಿನ್‌ಗಳಿಂದ ಹೀರಿ ಹಿಂಸಿಸುವುದು ಅನುಕರಣೀಯ, ಗೋಮಾತೆಯ ಕರುವನ್ನು ಬಲವಂತವಾಗಿ ಎಳೆದು ಕಟ್ಟಿ ಅದರ ಪಾಲಿನ ಹಾಲನ್ನು ಕಬಳಿಸುವುದು ಆನಂದನೀಯ. ಹೀಗೆ ಇವರ ಗೋಮಾತೆಯನ್ನು ಅನುದಿನವೂ ಹಿಂಸಿಸಿ ಪಡೆದ ಹಾಲು ಅದರಿಂದ ತೆಗೆದ ಬೆಣ್ಣೆ ತುಪ್ಪ ಮೊಸರು ಮಜ್ಜಿಗೆಗಳೆಲ್ಲಾ ಈ ಗೋಭಕ್ತರಿಗೆ ಹಾಗೂ ಅವರ ಮನೆಮಂದಿ ಮಕ್ಕಳಿಗೆ ಬೇಕೇ ಬೇಕು. ಈ ಪುರೋಹಿತಶಾಹಿಗಳ ಪೂಜೆ, ಅಭಿಷೇಕಗಳಿಗೆ ಉಪಯೋಗವಾಗಬೇಕು. ಎಂದಾದರೂ ಯಾರಾದರೂ ತಮ್ಮ ತಾಯಿಗೆ ಈ ರೀತಿ ಹಿಂಸೆ ಕೊಡುತ್ತಾರಾ? ಪೂಜಿಸುವ ದೇವತೆಯನ್ನು ಕೊಟ್ಟಿಗೆಯಲ್ಲಿ ಕಟ್ಟಿ ನೋವು ನೀಡುತ್ತಾರಾ? ಆದರೆ ಗೋವಿನ ಮೇಲೆ ನಿರಂತರವಾಗಿ ಆಗುತ್ತಿರುವ ದಿನನಿತ್ಯದ ಹಿಂಸೆಗೆ ಜಾಣಮರೆವನ್ನು ತೋರಿಸುವ ಗೋಪಾಲಕರಲ್ಲದ ಈ ಗೋಭಕ್ತರುಗಳು ಹಸುವನ್ನು ಸಾಗಿಸುವವರ ಮೇಲೆ ಹಲ್ಲೆ ಮಾಡುತ್ತಾರೆ, ಬರಡು ಹಸುಗಳನ್ನು ಕೊಂದು ಹಸಿವು ನೀಗಿಸಿಕೊಳ್ಳಲು ತಿನ್ನುವವರ ಮೇಲೆ ಕೆಂಡಕಾರುತ್ತಾರೆ, ಗೋಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಮತಾಂಧ ನಾಯಕರು ಪ್ರಚೋದಿಸುತ್ತಾರೆ. ದನಗಳನ್ನು ಕೊಂದು ವಿದೇಶಕ್ಕೆ ರಪ್ತು ಮಾಡುವ ಬ್ರಹತ್ ಮಾಂಸ ರಪ್ತು  ಕಂಪನಿಗಳ ಕ್ರೌರ್ಯವನ್ನು ಕಡೆಗಣಿಸುತ್ತಾರೆ. ಗೋಮಾರಾಟ ನಿಷೇಧ, ಗೋಮಾಂಸ ಭಕ್ಷಣೆ ಅಕ್ರಮ ಎಂದೆಲ್ಲಾ ಜೀವವಿರೋಧಿ ಕಾನೂನುಗಳನ್ನು ತಂದು ಅಸಂಖ್ಯಾತ ದಲಿತರು ಹಾಗೂ ಮುಸ್ಲಿಂ ಸಮುದಾಯದ ಮಾಂಸಾಹಾರಿ ಜನರ ಹೊಟ್ಟೆಯ ಮೇಲೆ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೇ.. ಇಂತಹ ಮತಾಂಧ ಶಕ್ತಿಗಳ ಜೀವವಿರೋಧಿ ನಿಲುವನ್ನೇ ವಿರೋಧಿಸಿ ಮೈಸೂರಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಿದ್ದು. ಸಾಂಕೇತಿಕವಾಗಿ ಗೋಮಾಂಸವನ್ನು ತಿಂದು ಪ್ರತಿಭಟಿಸಿದ್ದು. ಆಹಾರ ಪದ್ದತಿ ಹಾಗೂ ವ್ಯಕ್ತಿ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದು. ಸಮಾಜವನ್ನು ಒಡೆಯುವ ಹುನ್ನಾರ ಇದು ಎಂದು ದೇಶವನ್ನೇ ಧರ್ಮಾಧಾರಿತವಾಗಿ ಒಡೆಯುತ್ತಲೇ ಬಂದಿರುವ ಕೋಮುವಾದಿಗಳು ಆರೋಪಿಸಿದರು. ಸರಕಾರಿ ಕಟ್ಟಡದಲ್ಲಿ ಗೋಮಾಂಸ ತಿಂದಿರುವುದನ್ನೇ ದೊಡ್ಡದು ಮಾಡತೊಡಗಿದರು. ಹೋರಾಟದ ಸಾಗರಕೆ ಸಾವಿರಾರು ನದಿಗಳು ಎನ್ನುವುದನ್ನು ಈ ತಲೆತಿರುಕರಿಗೆ ಹೇಳುವವರಾದರೂ ಯಾರು? ಹಸು ಎನ್ನುವ ಪ್ರಾಣಿಯ ಮೇಲೆ ಮಾತೆ ದೇವತೆ ಎಂದು ಮಿತ್ಯಾರೋಪ ಮಾಡಿಕೊಂಡು ಬಹುಜನರ ಆಹಾರ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುತ್ತಿರುವ ಸಂಘ ಪರಿವಾರದ ಪುರೋಹಿತಶಾಹಿ ಮನಸ್ಸುಗಳ ಹುನ್ನಾರವನ್ನು ಪ್ರತಿಭಟಿಸುವುದು ಪ್ರಜ್ಞಾವಂತಹ ಹಕ್ಕೆಂಬುದು ಈ ಉನ್ಮಾದಿತರಿಗೆ ತಿಳಿಸುವುದಾದರೂ ಹೇಗೆ? ಹೀಗೆ ಪ್ರತಿಭಟನಾತ್ಮಕವಾಗಿ ದನದ ಮಾಂಸ ತಿಂದಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಕೂಡಾ ಪ್ರತಿಭಟನಾತ್ಮಕವಾಗಿ ಸಂಸತ್ತು ಹಾಗೂ ವಿಧಾನಸೌಧದಲ್ಲಿ ಮಾಂಸವನ್ನು ತಿಂದು ವಿರೋಧವನ್ನು ವ್ಯಕ್ತಪಡಿಸಲಾಗಿದೆ. ಟೌನ್‌ಹಾಲ್ ಮುಂದೆ ಗಿರೀಶ್ ಕಾರ್ನಾಡಾದಿಯಾಗಿ ಹಲವಾರು ಪ್ರಗತಿಪರರು ಗೋಮಾಂಸವನ್ನು ಹಂಚಿ ತಿಂದು ತೀವ್ರವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಆಗ ಕಾನೂನು  ಕ್ರಮದ ಬಗ್ಗೆ ಮಾತಾಡದ ಈ ಹಿಂದುತ್ವವಾದಿಗಳು ಈಗ ಗೋಮಾಂಶ ಸೇವನೆಯ ಸಾಂಕೇತಿಕ  ಪ್ರತಿಭಟನೆಯ ವಿರುದ್ಧ ಗುಲ್ಲೆಬ್ಬಿಸುತ್ತಿದ್ದಾರೆ.

ಕಟ್ಟಡ ಸರಕಾರದ್ದೋ ಇಲ್ಲವೇ ಖಾಸಗಿಯವರದ್ದೋ ಎನ್ನುವುದು ಇಲ್ಲಿ ಮುಖ್ಯವಲ್ಲಾ. ಅನ್ಯಾಯದ ವಿರುದ್ಧ ಪ್ರತಿಭಟಿಸುವುದೇ ಪ್ರಮುಖ ಉದ್ದೇಶ. ಇಷ್ಟಕ್ಕೂ ಸರಕಾರಿ ಕಟ್ಟಡಗಳಲ್ಲಿ ಮಾಂಸ ತಿನ್ನಬಾರದು ಎನ್ನುವುದು ಯಾವುದೇ ಕಾನೂನಿನಲ್ಲೂ ನಮೂದಾಗಿಲ್ಲಾ, ಸಂವಿಧಾನದ ಯಾವುದೇ ಪರಿಚ್ಚೇದದಲ್ಲಿ ಹೇಳಲಾಗಿಲ್ಲಾ, ಈ ನೈತಿಕತೆಯ ಗುತ್ತಿಗೆದಾರರಿಗೆ ಈ ಕಾನೂನುಗಳ ಬಗ್ಗೆ ಅರಿವೂ ಇರುವುದಿಲ್ಲಾ. ಇವರು ಅಂದುಕೊಂಡಿದ್ದೇ ಕಾನೂನು ಎಂದು ತಿಳಿದುಕೊಂಡವರಿಗೆ ಎಷ್ಟು ತಿಳಿಹೇಳಿದರೂ ಅರ್ಥವಾಗುವುದಿಲ್ಲಾ. ಸರಕಾರಿ ಕಟ್ಟಡಗಳಲ್ಲಿ ಮಾಂಸಾಹಾರವನ್ನು ನಿಷೇಧಿಸುವ ಕಾನೂನು ಮಾಡಿದರೂ ಅದನ್ನು ವಿರೋಧಿಸುವ ಹಾಗೂ ಸರಕಾರಿ ಕಟ್ಟಡಗಳಲ್ಲಿ ಮಾಂಸ ತಿಂದು ಪ್ರತಿಭಟಿಸುವ ವ್ಯಕ್ತಿ ಸ್ವಾತಂತ್ರ್ಯ ಇದ್ದೇ ಇದೆ. ಆದರೆ ಈ ಪ್ಯಾಸಿಸ್ಟ್ ಮನಸ್ಥಿತಿಯವರಿಗೆ ಅವರ ಜನವಿರೋಧಿ ನಂಬಿಕೆಗಳ ವಿರುದ್ಧ ನಡೆಯುವ ಯಾವುದೇ ರೀತಿಯ ಪ್ರತಿಭಟನೆ ಎಂದೂ ಸಹ್ಯವಾಗಿವುದಿಲ್ಲಾ. ಪುರೋಹಿತಶಾಹಿ ಮನುವಾದಿಗಳು ಶತಮಾನಗಳಿಂದ ಹೇರಿಕೆ ಮಾಡಿಕೊಂಡು ಬಂದ ಅಸಂಗತ ಮೌಢ್ಯಗಳ ವಿರುದ್ಧ ಮಾಡಲಾಗುವ ವೈಚಾರಿಕ ನಡೆಗಳು ಮತಾಂಧರಿಗೆ ಜೀರ್ಣವಾಗುವುದಿಲ್ಲಾ. ತಮ್ಮ ಜೀವವಿರೋಧಿ ನಂಬಿಕೆಗಳನ್ನು ಇಡೀ ದೇಶವಾಸಿಗಳ ಮೇಲೆ ಹೇರಬೇಕೆಂಬ ಹಿಂದುತ್ವವಾದಿಗಳ ಹುನ್ನಾರಗಳಿಗೆ ಕೊನೆಮೊದಲೆಂಬುದಿಲ್ಲಾ.


ಪ್ರತಾಪ ಸಿಂಹ ಎನ್ನುವ ಬಿಜೆಪಿಯ ಮತಾಂಧ ಸಂಸದ ಮನೆಯಲ್ಲಿ ಯಾವುದೇ ಮಾಂಸ ತಿನ್ನಲಿ, ಆದರೆ ಸರಕಾರಿ ಕಛೇರಿಯಲ್ಲಿ ಮಾಂಸಾಹಾರ ಭಕ್ಷಣೆಗೆ ಅವಕಾಶವಿಲ್ಲಾ, ಕಲಾಮಂದಿರದಲ್ಲಿ ಮಾಂಸಾಹಾರ ಸೇವಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಪ್ರಾದ್ಯಾಪಕ ಹುದ್ದೆಯಿಂದ ಮಹೇಶಚಂದ್ರ ಗುರುವನ್ನು ವಜಾಗೊಳಿಸಬೇಕು ಎಂದು ಗುಡುಗಿದ್ದಾರೆ. ವಿಚಾರ ಸಂಕಿರಣದ ನಂತರ ಕಲಾಮಂದಿರಕ್ಕೆ ದೌಡಾಯಿಸಿದ ಬಿಜೆಪಿ ಕೋಮುವಾದಿ ಕಾರ್ಯಕರ್ತರುಗಳು ಮಾವಿನ ಎಲೆಗಳ ಮೂಲಕ ಗೋಮೂತ್ರವನ್ನು ಕಲಾಮಂದಿರದ ಆವರಣದಲ್ಲಿ ಸಿಂಪಡಿಸಿ ಶುದ್ಧಿ ಮಾಡಿದೆವು ಎಂದುಕೊಂಡು ತಮ್ಮ ಮೌಢ್ಯವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಸಂಭ್ರಮಿಸಿದರು. ಈ ಮತಾಂಧರ ಹಾಗೂ ಅವರ ಸಮರ್ಥಕರ ಹುನ್ನಾರಗಳು ಗೊತ್ತಿರುವಂತಹುದೇ ಆಗಿವೆ. ಆದರೆ ಈ ಕಾಂಗ್ರೆಸ್ ಸರಕಾರಕ್ಕೇನಾಗಿದೆ? ಹಿಂದುತ್ವವಾದಿಗಳ ಆಟೋಟೋಪಕ್ಕೆ ಪೂರಕವಾಗಿ ಯಾಕೆ ಸ್ಪಂದಿಸುತ್ತಿದೆ? ವಿಚಾರ ಸಂಕಿರಣದಲ್ಲಿ ಮಾಂಸಾಹಾರ ಸೇವನೆ ಆಗಿದೆ ಎಂದು ಸುದ್ದಿಯಾದ ತಕ್ಷಣ ಜಾಗೃತರಾದ ಮೈಸೂರಿನ ಜಿಲ್ಲಾಧಿಕಾರಿ ಡಿ.ರಂಧೀಪ್ ಮಾಡಿದ ಮೊದಲ ಆದೇಶವೇನೆಂದರೆ ವಿಚಾರ ಸಂಕಿರಣವನ್ನು ಆಯೋಜಿಸಿದ ಚಾರ್ವಾಕ ಟ್ರಸ್ಟಿಗೆ ನೋಟೀಸ್ ಜಾರಿಮಾಡಿದ್ದು. ಆ ಸಂಸ್ಥೆಯನ್ನು ಬ್ಲಾಕ್‌ಲಿಸ್ಟಿಗೆ ಸೇರಿಸಲು ನಿರ್ಧರಿಸಿ ಕಲಾಮಂದಿರಕ್ಕೆ ಕಟ್ಟಿದ ಮುಂಗಡ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಮಾಡಲಾಗಿದೆ. ಇದು ನಿಜಕ್ಕೂ ಆಘಾತಕಾರಿಯಾದ ಸಂಗತಿ. ಪ್ರತಿಭಟನೆಗಳನ್ನೇ ಇಲ್ಲವಾಗಿಸುವ ಆಳುವ ವರ್ಗಗಳ ಕುತಂತ್ರವಾಗಿದೆ. ಮತಾಂಧ ಶಕ್ತಿಗಳ ತಾಳಕ್ಕೆ ಜಿಲ್ಲಾಡಳಿತ ಪೂರಕವಾಗಿ ಕೆಲಸಮಾಡುತ್ತಿದೆ ಎಂಬುದು ಗೊತ್ತಾಗುತ್ತದೆ.


ದನ ಕುರಿ ಕೋಳಿ ಮೀನು ಸೇರಿದಂತೆ ಎಲ್ಲಾ  ಮಾಂಸಗಳೂ ಒಂದೇ, ಯಾವುದೂ ಮೇಲಲ್ಲಾ ಯಾವುದೂ ಕೀಳಲ್ಲಾ. ನಾವೇನೂ ಸಂವಿಧಾನ ವಿರೋಧಿ ಕೆಲಸವನ್ನಂತೂ ಮಾಡಿಲ್ಲಾ. ತಿಳುವಳಿಕೆ ಇಲ್ಲದವರು ಸುಮ್ಮನೇ ಕೂಗಾಡುತ್ತಿದ್ದಾರೆ. ಯಾವುದೇ ರೀತಿಯ ಮೊಕದ್ದಮೆ ದಾಖಲಿಸಲು ಎದುರಿಸಲು ನಾವು ಸಿದ್ಧ.. ಎಂದು ಪ್ರೊ.ಕೆ.ಎಸ್.ಭಗವಾನ್‌ರವರು ಮತಾಂಧರಿಗೆ ಉತ್ತರಿಸಿದ್ದಾರೆ. 

ಚಾರ್ವಾಕ ಟ್ರಸ್ಟ್ ಅನೇಕ ವೈಚಾರಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ, ವೈಚಾರಿಕ ನಾಟಕಗಳನ್ನು ಕಟ್ಟಿ ಆಡಿಸುತ್ತಾ ಈ ಪುರೋಹಿತಶಾಹಿಗಳ ಪಾರಂಪರಿಕ ಕುತಂತ್ರಗಳನ್ನು ಬಯಲು ಮಾಡುತ್ತಿದೆ. ಇದು ಹಿಂದುತ್ವವಾದಿಗಳಿಗೆ ನುಂಗಲಾರದ ತುತ್ತಾಗಿದೆ. ಈಗ ಪ್ರತಿಭಟನಾತ್ಮಕವಾಗಿ ಗೋಮಾಂಸ ಸೇವಿಸಿದ್ದನ್ನೇ ನೆಪವಾಗಿಟ್ಟುಕೊಂಡು ಆ ವೈಚಾರಿಕ ಸಂಸ್ಥೆಯನ್ನು ನಾಶಗೊಳಿಸುವ ಹಾಗೂ ಅದರ ಸಂಘಟಕರ ಉತ್ಸಾಹವನ್ನು ಕುಗ್ಗಿಸುವ ಕೆಲಸವನ್ನು ಮನುವಾದಿಗಳು ಮಾಡುತ್ತಿದ್ದಾರೆ. ಅವರ ಉದ್ದೇಶಕ್ಕೆ ಪೂರಕವಾಗಿ ಜಿಲ್ಲಾಧಿಕಾರಿ ಸ್ಪಂದಿಸುತ್ತಿರುವುದು ಆಘಾತಕಾರಿಯಾಗಿದೆ. ಇದು ಮತಾಂಧ ಶಕ್ತಿಗಳಿಗೆ ಇನ್ನಷ್ಟು ಪ್ರೇರಣೆಯನ್ನೊದಗಿಸುತ್ತದೆ. ಪ್ರಜ್ಞಾವಂತಹ ನೈತಿಕ ಸ್ತೈರ್ಯವನ್ನು ಕಡಿಮೆಗೊಳಿಸುತ್ತದೆ. ಹೀಗೇ ಕಾಂಗ್ರೆಸ್ ಸರಕಾರಕ ಕೋಮುವಾದಿಗಳ ಆಟೋಟೋಪಕ್ಕೆ ಹೆದರು ಅವರ ಪರವಾಗಿ ಆದೇಶಗಳನ್ನು ಕೈಗೊಂಡು ವಿಚಾರವಾದಿಗಳ ದ್ವನಿಯನ್ನು ದಮನಿಸಲು ನೋಡಿದರೆ ತನ್ನ ಅಂತ್ಯವನ್ನು ತಾನೇ ತಂದುಕೊಳ್ಳುವುದರಲ್ಲಿ ಸಂದೇಹವಿಲ್ಲಾ. ಮತಾಂಧ ದುಷ್ಟ ಶಕ್ತಿಗಳು ಇನ್ನೂ ಹೆಚ್ಚು ವಿಜ್ರಂಭಿಸುವುದರಲ್ಲೂ ಅನುಮಾನವಿಲ್ಲಾ.

                                   - ಶಶಿಕಾಂತ ಯಡಹಳ್ಳಿ
 



ಹೀಗಾಗಿ ಲೇಖನಗಳು ತಹ ತಹ.....97 ಅಹಾರದ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯ : ಮೈಸೂರಲ್ಲೊಂದು ಅನಗತ್ಯ ವಿವಾದ

ಎಲ್ಲಾ ಲೇಖನಗಳು ಆಗಿದೆ ತಹ ತಹ.....97 ಅಹಾರದ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯ : ಮೈಸೂರಲ್ಲೊಂದು ಅನಗತ್ಯ ವಿವಾದ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ತಹ ತಹ.....97 ಅಹಾರದ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯ : ಮೈಸೂರಲ್ಲೊಂದು ಅನಗತ್ಯ ವಿವಾದ ಲಿಂಕ್ ವಿಳಾಸ https://dekalungi.blogspot.com/2017/06/97.html

Subscribe to receive free email updates:

0 Response to "ತಹ ತಹ.....97 ಅಹಾರದ ಹಕ್ಕು ಮತ್ತು ವ್ಯಕ್ತಿ ಸ್ವಾತಂತ್ರ್ಯ : ಮೈಸೂರಲ್ಲೊಂದು ಅನಗತ್ಯ ವಿವಾದ"

ಕಾಮೆಂಟ್‌‌ ಪೋಸ್ಟ್‌ ಮಾಡಿ